ಇಂಟರ್ನೆಟ್ ಯುಗದಲ್ಲಿ ಡಿಜಿಟಲ್ ಮಾರ್ಗಗಳ ಮೂಲಕ ಹಣ ಸಂಪಾದಿಸುವುದು ಪ್ರತಿಯೊಬ್ಬರ ಕನಸಾಗಿದೆ. ಅದರಲ್ಲಿ ಅತ್ಯಂತ ಜನಪ್ರಿಯ ನಂಬಿಕೆ ಮತ್ತು ದೀರ್ಘಕಾಲದ ವರೆಗೆ ಆದಾಯ ತಂದು ಕೊಡುವ ಒಂದು ಅದ್ಭುತ ಕ್ಷೇತ್ರವೆಂದರೆ ಬ್ಲಾಗಿಂಗ್(blogging) ನಿಮಗೆ ಬರೆಯುವ ಆಸಕ್ತಿ ಇದ್ದರೆ ಯಾವುದಾದರು ಒಂದು ವಿಷಯದ ಬಗ್ಗೆ ಆಳವಾದ ಜ್ಞಾನವಿದ್ದರೆ ನೀವು ಮನೆಯಲ್ಲಿ ಕುಳಿತು ಬ್ಲಾಗಿಂಗ್ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬಹುದು.
ಆದರೆ ಬ್ಲಾಗಿಂಗ್ ಎಂದರೇನು? ಅದನ್ನು ಪ್ರಾರಂಭಿಸುವುದೇಗೆ ಅದರಿಂದ ಹಣ ಗಳಿಸುವುದು ಹೇಗೆ ಎಂಬ ಗೊಂದಲಗಳು ನಿಮ್ಮಲ್ಲಿದ್ದರೆ ಈ ಲೇಖನ ನಿಮಗಾಗಿ. ಈ ಸಮಗ್ರ ಮಾರ್ಗದರ್ಶನ ಬ್ಲಾಗಿಂಗ್ ಲೋಕದ ಸಂಪೂರ್ಣ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಿಳಿಸಿಕೊಡಲಾಗುತ್ತದೆ.
ಬ್ಲಾಗಿಂಗ್ ಎಂದರೇನು(What is blogging ?)
ಸರಳವಾಗಿ ಹೇಳುವುದಾದರೆ ಬ್ಲಾಗ್ ಎನ್ನುವುದು ಇಂಟರ್ನೆಟ್ಟಲ್ಲಿರುವ ಒಂದು ವೆಬ್ಸೈಟ್. ಇಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ನಿಯಮಿತವಾಗಿ ತಮಗೆ ತಿಳಿದಿರುವ ಮಾಹಿತಿ, ಅನುಭವ, ಅಥವಾ ಆಲೋಚನೆಗಳನ್ನು ಲೇಖನಗಳ ಮೂಲಕ ಪ್ರಕಟಿಸುತ್ತಾರೆ
ಹೀಗೆ ವೆಬ್ ಸೈಟುಗಳಲ್ಲಿ ಲೇಖನಗಳು ಬರೆಯುವ ಮತ್ತು ನಿರ್ವಹಿಸುವ ಪ್ರಕ್ರಿಯೆಯನ್ನು ಬ್ಲಾಗಿಂಗ್ ಎನ್ನಲಾಗುತ್ತದೆ. ಯಾರು ಬ್ಲಾಗ್ ನಡೆಸುತ್ತಾರೋ ಅವರನ್ನು ಬ್ಲಾಗರ್ ಎಂದು ಕರೆಯುತ್ತಾರೆ. ಹಿಂದೆ ಬ್ಲಾಗುಗಳನ್ನು ಕೇವಲ ವೈಯಕ್ತಿಕ ಡೈರಿಗಳಂತೆ ಬಳಸಲಾಗಿತ್ತು ಆದರೆ ಇವಾಗ ಬ್ಲಾಕ್ ಒಂದು ದೊಡ್ಡ ಬಿಜಿನೆಸ್ ಆಗಿ ಬೆಳೆದಿದೆ. ಜನರು ತಮಗೆ ಬೇಕಾದ ಮಾಹಿತಿಗಾಗಿ ಗೂಗಲ್ನಲ್ಲಿ ಹುಡುಕಿದಾಗ ಸಿಗುವ ವೆಬ್ಸೈಟ್ಗಳು ಈ ಬ್ಲಾಗುಗಳು.
ಬ್ಲಾಗ್ ಆರಂಭಿಸಲು ಸರಿಯಾದ ವಿಷಯವನ್ನು ಆಯ್ಕೆ ಮಾಡುವುದು ಹೇಗೆ?
ಬ್ಲಾಗಿನಲ್ಲಿ ಪ್ರಸಿದ್ಧಿ ಪಡೆಯಲು ಮೊದಲು ಪ್ರಮುಖ ಹಂತವೆಂದರೆ ಸರಿಯಾದ ವಿಷಯ ಆಯ್ಕೆ ಮಾಡುವುದು. ನೀವು ಯಾವ ವಿಷಯದ ಬಗ್ಗೆ ಲೇಖನಗಳನ್ನು ಬರೆಯಲು ಬಯಸುತ್ತೀರಿ ಎಂಬುವುದು ಮೊದಲೇ ನಿರ್ಧರಿಸಬೇಕು. ಎಲ್ಲ ವಿಷಯಗಳ ಬಗ್ಗೆ ಒಂದೇ ಬ್ಲಾಗಿಂಗ್ ನಲ್ಲಿ ಬರೆಯುವ ಬದಲು, ಯಾವುದಾದರೂ ಒಂದು ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿದ್ದರೆ ಗೂಗಲ್ ನಲ್ಲಿ ನಿಮ್ಮ ವೆಬ್ಸೈಟ್ ಬೇಗನೆ ಪ್ರಸಿದ್ಧಿ ಆಗುತ್ತದೆ ಬ್ಲಾಗಿಂಗ್.
1.ಜನಪ್ರಿಯ ಬ್ಲಾಗಿಂಗ್ ವಿಷಯಗಳು(Popular Niches):
.ತಂತ್ರಜ್ಞಾನ(Technology):
ಮೊಬೈಲ್ ರಿವ್ಯೂ, ಸಾಫ್ಟ್ವೇರ್, ಹೊಸ ಗೆಜೆಟ್ ಗಳು, ಎ ಐ ತಂತ್ರಜ್ಞಾನ.
. ಆರೋಗ್ಯ ಮತ್ತು ಫಿಟ್ನೆಸ್(Health&fitness):
ತೂಕ ಕಡಿಮೆ ಮಾಡುವುದು, ಯೋಗ ಮಾಡುವುದು ಮನೆಮದ್ದು, ಜಿಮ್ ಡಯಟ್.
. ಪ್ರವಾಸ(Travel):
ಪ್ರವಾಸಿ ತಾಣಗಳ ಮಾಹಿತಿ, ಬಜೆಟ್ ಟ್ರಾವೆಲ್ಸ್ ಟಿಪ್ಸ್, ಹೋಟೆಲ್ ರಿವ್ಯೂ.
. ವೈಯಕ್ತಿಕ ಹಣಕಾಸು(personal finance):
ಶೇರು ಮಾರುಕಟ್ಟೆ, ಹೂಡಿಕೆ, ಮ್ಯೂಚುವಲ್ ಫಂಡ್ಸ್, ಹಣ ಉಳಿಸುವ ಉಪಯೋಗಗಳು.
. ಶಿಕ್ಷಣ ಮತ್ತು ಉದ್ಯೋಗEeducation&jobs);
ಸರ್ಕಾರಿ ಉದ್ಯೋಗಗಳ ಮಾಹಿತಿ, ಪರೀಕ್ಷೆಯ ತಯಾರಿ ಹೇಗೆ ಮಾಡುವುದು.
. ಅಡುಗೆ(cooking/food);
ಹೊಸ ರೆಸಿಪಿಗಳು, ಫುಡ್ ರಿವ್ಯೂ ,ಉತ್ತಮವಾದ ಹಾಗೂ ಆರೋಗ್ಯಕರ ಅಡುಗೆಗಳು.
2.ವಿಷಯವನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು:
1. ಯಾವುದೇ ವಿಷಯದಲ್ಲಾದರೂ ನಿಮಗೆ ನಿಜವಾದ ಆಸಕ್ತಿ ಮತ್ತು ಜ್ಞಾನ ಇರಬೇಕು.
2.ಜನರು ಇಂಟರ್ನೆಟ್ ನಲ್ಲಿ ಆ ವಿಷಯದ ಬಗ್ಗೆ ಹುಡುಕುತಿರಬೇಕು.
3. ಆ ವಿಷಯದಲ್ಲಿ ಅಣಗಳಿಸುವ ಅವಕಾಶಗಳು ಇರಬೇಕು.
3.ಬ್ಲಾಗ್ ಪ್ರಾರಂಭಿಸುವುದು ಹೇಗೆ? ಪ್ರತಿಯೊಂದು ಮಾಹಿತಿ ಇಲ್ಲಿದೆ.
ಒಮ್ಮೆ ನೀವು ವಿಷಯವನ್ನು ಆಯ್ಕೆ ಮಾಡಿದ ನಂತರ ನಿಮ್ಮ ಬ್ಲಾಗ್ ವೆಬ್ಸೈಟ್ ಅನ್ನು ಲೈವ್ ಮಾಡಲು ಈಗಿನ ಹಂತಗಳನ್ನು ಅನುಸರಿಸಿ ಬೇಕು.
ಡೋಮೈನ್ ಎಂದರೆ ನಿಮ್ಮ ವೆಬ್ಸೈಟ್ನ ವಿಳಾಸ. ಉದಾಹರಣೆಗೆ:: / /your name ಅಥವಾ;/ /kannadablog.com.
.ನಿಮ್ಮ ವಿಷಯಕ್ಕೆ ಒಂದುಕೆಯಾಗುವಂತೆ ಸಣ್ಣ ಸುಲಭವಾಗಿ ನೆನಪಿನಲ್ಲಿಡಬಹುದಾದ ಹೆಸರನ್ನು ಆಯ್ಕೆ ಮಾಡಿ.
ಸಾಧ್ಯವಾದರೆ.com ಅಥವಾ ಭಾರತವನ್ನು ಗುರಿಯಾಗಿಟ್ಟುಕೊಂಡು.in ಅನ್ನು ಬಳಸಿ.
.Namecheap,GoDaddy, ಅಥವಾHostinger ನಂತಹ ಸೈಟ್ ಗಳಿಂದ ಡೊಮೈನ್ ಖರೀದಿಸಬಹುದು .
4.ವೆಬ್ ಪೋಸ್ಟಿಂಗ್ ಖರೀದಿ ಮಾಡುವುದು(Web Hosting)
ಪೋಸ್ಟಿಂಗ್ ಎಂದರೆ ಇಂಟರ್ನೆಟ್ ನಲ್ಲಿ ನಿಮ್ಮ ವೆಬ್ಸೈಟ್ನ ಫೈಲ್ ಗಳು ಚಿತ್ರಗಳು ಲೇಖನಗಳು ಸಂಗ್ರಹಿಸಿಡುವ ಒಂದು ಸುರಕ್ಷಿತ ಜಾಗ. ಉತ್ತಮ ಓಸ್ಕಿಂಗ್ ಇಲ್ಲದಿದ್ದರೆ ನಿಮ್ಮ ವೆಬ್ಸೈಟ್ಗಳು ನಿಧಾನವಾಗುತ್ತದೆ.
. ಆರಂಭಿಕರಿಗಾಗಿ Hostinger,Bluehost, ಅಥವಾ Siteground ಅತ್ಯುತ್ತಮ ಓಟಿಂಗ್ ಸಂಸ್ಥೆಗಳಾಗಿವೆ.
ಯಾವಾಗಲೂ WordPressHosting ಅಥವಾ Sherd hosting ಪ್ಲಾನ್ ಆಯ್ಕೆ ಮಾಡಿಕೊಳ್ಳಿ.
. ವರ್ಡ್ ಪ್ರೆಸ್ ಇನ್ಸ್ಟಾಲ್ ಮಾಡುವುದು (Word press)
ಇಂದು ಪ್ರಪಂಚದ ಶೇಕಡ 40ಕ್ಕಿಂತ ಹೆಚ್ಚು ವೆಬ್ಸೈಟ್ಗಳು ವರ್ಡ್ಸ್ ಪ್ರೆಸ್ ಮೂಲಕವೇ ನಡೆಯುತ್ತವೆ.
ಇದು ಯಾವುದೇ ಕೋಡಿಂಗ್ ಜ್ಞಾನವಿಲ್ಲದೆ ವೆಬ್ಸೈಟ್ಗಳು ವಿನ್ಯಾಸಗೊಳಿಸಲು ಇರುವ ಅತ್ಯಂತ ಸುಲಭವಾದ ಸಾಫ್ಟ್ವೇರ್.
ನಿಮ್ಮ ವೋಟಿಂಗ್ ಖಾತೆಗೆ ಲಾಗಿನ್ ಆಗಿ ‘one-Click wordpress install’ ಆಯ್ಕೆಯನ್ನು ಬಳಸಿ WordPress ಅನ್ನು ಸುಲಭವಾಗಿ ಇನ್ಸ್ಟಾಲ್ ಮಾಡಬಹುದು.
(ಗಮನಿಸಿ: ನೀವು ಸಂಪೂರ್ಣ ಉಚಿತವಾಗಿ ಆರಂಭಿಸಬೇಕಿದ್ದರೆ ಗೂಗಲ್Blogger.com ಬಳಸಬಹುದು ಆದರೆ ಅದರಲ್ಲಿ ಕಮ್ಮಿ ಉಪಯೋಗಗಳು ಇರುತ್ತವೆ. ಪ್ರೊಫೆಷನಲ್ ಆಗಿ ಬೆಳೆಯಲು WordPress ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಉಪಯುಕ್ತ.
.ವೆಬ್ಸೈಟ್ ವಿನ್ಯಾಸ(Theme & Plugings)
ವರ್ಡಪ್ರೆಸ್ ಇನ್ಸ್ಟಾಲ್ ಆದ ನಂತರ, ನಿಮ್ಮ ಬ್ಲಾಗ್ ನೋಡಲು ಸುಂದರವಾಗಿರಬೇಕು.
. ಥೀಮ್(Theme):
ಲೈಟ್ ವೇಟ್ ಮತ್ತು ಮೊಬೈಲ್ ಫ್ರೆಂಡ್ಲಿ ಆಗಿರುವ Genaratepress,Astra, ಅಥವಾKadence ನಂತರ ಉಚಿತ ಥೀಮ್ ಗಳನ್ನು ಬಳಸಿ.
. ಪ್ಲಗಿನ್ ಗಳು(Plugins): ವೆಬ್ಸೈಟ್ನ ಕಾರ್ಯಕ್ಷಮತೆ ದಕ್ಷತೆ ಹೆಚ್ಚಿಸಲು Rankmath(SEO ಗಾಗಿ),LiteSpeed cache( ವೇಗಕ್ಕಾಗಿ) ಮತ್ತು
ಬ್ಯಾಕಪ್ ಗಾಗಿ ಇನ್ಸ್ಟಾಲ್ ಮಾಡಿ.
4.ಎಸ್ ಇ(SEO) ಓ.ಎಂದರೇನು?ಬ್ಲಾಗ್ ಬರಹಗಳನ್ನು ಗೂಗಲ್ ನಲ್ಲಿ ವೀಕ್ಷಣೆ ಮಾಡುವುದು ಹೇಗೆ?
ನೀವು ಎಷ್ಟು ಚೆನ್ನಾಗಿ ಬರೆದರು ಜನರು ನಿಮ್ಮ ವೆಬ್ ಸೈಟ್ ಗೆ ಬರೆದಿದ್ದರೆ ಬ್ಲಾಗಿಂಗ್ ನಿಂದ.ಪ್ರಯೋಜನವಿಲ್ಲ..ಜನರು ಗೂಗಲ್ ನಲ್ಲಿ ಹುಡುಕಿದಾಗ.ನಿಮ್ಮ ಲೇಖನ?ಮೊದಲ ಪುಟದಲ್ಲಿ ಬರಲು ಮಾಡುವ ಪ್ರಕ್ರಿಯೆ.ಎಸ್ ಇ ಓ.(Search Engine Optimization)ನಡೆಯಲಾಗುತ್ತದೆ ಬ್ಲಾಗಿಂಗ್.
.ಕೀ ವರ್ಡ್ ರಿಸರ್ಚ್.(Keyword Research):
ಜನರು ಗೂಗಲ್ ನಲ್ಲಿ ಯಾವ ಪದಗಳನ್ನು ಬಳಸಿ ಹುಡುಕುತ್ತಿದ್ದಾರೆ ಎಂಬುದನ್ನು ತಿಳಿಯುವುದೇ ಕೀ ವರ್ಡ್ ರಿಸರ್ಚ್. ಉದಾಹರಣೆಗೆ.ಹಣ ಗಳಿಸುವುದು ಹೇಗೆ? ಎಂಬುದು ಒಂದು ಕೀವರ್ಡು.Ahreft,SeMrush,ಅಥವಾ ಉಚಿತ ಗೂಗಲ್ ಕೀ ವರ್ಡ್ ಪ್ಲಾನರ್ ಬಳಸಿ.ಕಡಿಮೆ ಕಾಂಪಿಟೇಷನ್ ಇರುವ ಕಿವರ್ಡನ್ನು ಹುಡುಕಿ.
.ಆನ್- ಪೇಜ್ ಎಸ್ ಇ ಓ(On-PsgeSEO):
.ಶೀರ್ಷಿಕೆ(Title):ನಿಮ್ಮ ಮುಖ್ಯ ಕೀಬೋರ್ಡ್ ಶೀರ್ಷಿಕೆಯಲ್ಲಿ ಇರಬೇಕು.ಮತ್ತು ಅದು ಆಕರ್ಷಕವಾಗಿರಬೇಕು.
ಪರಾವಲಂಬಿ ಶೀರ್ಷಿಕೆಗಳು(H2, H3 Tags):
ಲೇಖನವನ್ನು ಸಣ್ಣ ಸಣ್ಣ ಪ್ಯಾರಾಗ್ರಾಫ್ ಆಗಿ ವಿಂಗಡಿಸಿ ಸಬ್ ಎಂಡಿಂಗ್ ಗಳನ್ನು ಬಳಸಿ.
.ಚಿತ್ರಗಳು(Images)
ಲೇಖನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಳಸಿ ಅದಕ್ಕೆ ಆಲ್ಟ್ ಟೆಕ್ಸ್ಟ್(Alt Text) ನೀಡಿ.
.ಆಂತರಿಕ ಲಿಂಕ್ ಗಳು(Internal Links):ನಿಮ್ಮದೇ ವೆಬ್ ಸೈಟ್ ನ ಇತರ. ಲಿಂಕ್ ಗಳನ್ನು ಈ ಲೇಖನದಲ್ಲಿ ನೀಡಿ.
5.ಬ್ಲಾಗ್ ನಿಂದ ಹಣ ಗಳಿಸುವುದು ಹೇಗೆ?
ಬ್ಲಾಗಿಗೆ.ಗೆ ಟ್ರಾಫಿಕ್(ವೀಕ್ಷಕರು) ಬರಲು ಆರಂಭಿಸಿದ ತಕ್ಷಣ.ನೀವು ಹಣ ಗಳಿಸಲು ಹಲವು ಮಾರ್ಗಗಳಿವೆ.ಅವುಗಳಲ್ಲಿ ಪ್ರಮುಖವಾದುವು ಇಲ್ಲಿವೆ.
1.ಗೂಗಲ್ ಆ್ಯಡ್ ಸೆನ್ಸ್.(Google Adsence )
ಇದು ಬ್ಲಾಗರ್ಗಳು.ಹಣ ಗಳಿಸುವ ಅತ್ಯಂತ ಜನಪ್ರಿಯ ಮತ್ತು ಸುಲಭವಾದ ಮಾರ್ಗವಾಗಿದೆ.ನಿಮ್ಮ ಬ್ಲಾಗ್ ಗಳಿಗೆ ಗೂಗಲ್ ಆ್ಯಡ್ ಸೆನ್ಸ್ ಅಪ್ರೋಲ್ ಸಿಕ್ಕರೆ.ಗೂಗಲ್ ನಿಮ್ಮ ಲೇಖನಗಳ ನಡುವೆ ಜಾಹೀರಾತುಗಳನ್ನು.ಪ್ರದರ್ಶಿಸುತ್ತದೆ.ನಿಮ್ಮ ವೆಬ್ ಸೈಟ್ ಗೆ ಬರುವ ವೀಕ್ಷಕರು ಆ ಜಾಹೀರಾತುಗಳನ್ನು ನೋಡಿದಾಗ ಅಥವಾ ಕ್ಲಿಕ್ ಮಾಡಿದಾಗ ಗೂಗಲ್ ನಿಮಗೆ.ಹಣ ಬೋಧಿಸುತ್ತದೆ.
2ಅಪಲಿಯೇಟ್ ಮಾರ್ಕೆಟಿಂಗ್(Affiliate Marketing)
ಈ ವಿಧಾನದಲ್ಲಿ ನೀವು ಯಾವುದೇ ಕಂಪನಿಯ ಉತ್ಪನ್ನ ಅಥವಾ ಸೇವೆಯನ್ನು ನಿಮ್ಮ ಬ್ಲಾಗ್ ಲೇಖನದ ಮೂಲಕ ಪ್ರಚಾರ ಮಾಡುತ್ತೀರಿ.ಉದಾಹರಣೆಗೆ ಅಮೆಜಾನ್ ಅಪೀಲಿಯೇಟ್ ಪ್ರೋಗ್ರಾಮ್ ಸೇರಿ ಒಂದು ಮೊಬೈಲ್ ಫೋನ್ ಲಿಂಕ್ ಅನ್ನು ನಿಮ್ಮ ಲೇಖನದಲ್ಲಿ ಹಾಕುತ್ತೀರಿ.ಯಾರಾದರೂ ಆ ಲಿಂಕ್ ಕ್ಲಿಕ್ ಮಾಡಿ ಮೊಬೈಲ್ ಖರೀದಿಸಿದರೆ ನಿಮಗೆ ನಿರ್ದಿಷ್ಟ ಕಮಿಷನ್ ಸಿಗುತ್ತದೆ.ಆ್ಯಡ್ ಸೆನ್ಸ್ಗಿಂ ತ ಅಪೀಲಿಯೇಟ್ ಮಾರ್ಕೆಟ್ ನಲ್ಲಿ ಅತಿ ಹೆಚ್ಚು ಹಣ ಗಳಿಸಬಹುದು.
3.ಪ್ರಾಯೋಜಿತ ಲೇಖನಗಳು.(Sponsored posts)
ನಿಮ್ಮ ಬ್ಲಾಗ್ ಪ್ರಸಿದ್ಧಿಯಾದಾಗ ವಿವಿಧ ಬ್ಯಾಂಡ್ ಗಳು ಅಥವಾ ಕಂಪನಿಗಳು ತಮ್ಮ ಉತ್ಪನ್ನಗಳ ಬಗ್ಗೆ ಲೇಖನ ಬರೆಯಲು ನಿಮ್ಮನ್ನು ಸಂಪರ್ಕಿಸುತ್ತವೆ.ಅವರ ಬಗ್ಗೆ ಒಂದು ಪಾಸಿಟಿವ್ ರಿವ್ಯೂ ಬರೆಯಲು ಅವರು ನಿಮಗೆ ದೊಡ್ಡ ಮತದಾನವನ್ನು ನೀಡುತ್ತಾರೆ.
4.ಫ್ರೀಲ್ಯಾನ್ಗ್ ಸೇವೆಗಳು.(Freelancing services)
ನಿಮ್ಮ ಬ್ಲಾಗ್ ಅನ್ನುಫೋರ್ಟ್ ಪೋಲಿಯೋ
ಆಗಿ ಬಳಸಿ.ಇತರ ಕಂಪನಿಗಳಿಗೆ ಕಂಟೆಂಟ್ ರೇಟಿಂಗ್.ವೆಬ್ ಡಿಸೈನಿಂಗ್.ಮತ್ತು ಎಸ್ ಇ ಒ ಸೇವೆಗಳನ್ನು ನೀಡಿ ಹಣ ಗಳಿಸಬಹುದು.
5.ಯಶಸ್ವಿ.ಬ್ಲಾಗರ್ ಆಗಲು ಪ್ರಮುಖ ಸಲಹೆಗಳು.
ಬ್ಲಾಗಿಂಗ್ ಎಂಬುದು.ರಾತ್ರೋರಾತ್ರಿ.ಶ್ರೀಮಂತರಾಗುವ ಯೋಜನೆಯಲ್ಲ ತಾಳ್ಮೆ ಮತ್ತು ನಿರಂತರ ಪರಿಶ್ರಮದ ಅಗತ್ಯವಿದೆ.ಯಶಸ್ವಿಯಾಗಲು ಈ ಕೆಳಗಿನ ಸೂತ್ರಗಳನ್ನು ನೆನಪಿಟ್ಟುಕೊಳ್ಳಿ.
.ನಿರಂತರತೆ.(consistency):ವಾರಕ್ಕೆ ಕನಿಷ್ಠ ಎರಡರಿಂದ ಮೂರು ಗುಣಮಟ್ಟದ ಲೇಖನಗಳನ್ನು ನಿಯಮಿತವಾಗಿಯೂ ಪೋಸ್ಟ್ ಮಾಡಿ.
.ಗುಣಮಟ್ಟಕ್ಕೆ ಆದ್ಯತೆ.(Quality over Quantity):
ಕಾಪಿ-ಪೇಸ್ಟ್.ಮಾಡ್ಬೇಡಿ.ಓದುಗರಿಗೆ.ಉಪಯುಕ್ತವಾಗುವ.ಆಳವಾದ.ಮತ್ತು ಅಧಿಕೃತ ಮಾಹಿತಿಯನ್ನು ನೀಡಿ.
.ಸೋಶಿಯಲ್ ಮೀಡಿಯಾ ಬಳಕೆ:
ನಿಮ್ಮ ಲೇಖನಗಳನ್ನು.ಫೇಸ್ ಬುಕ್.ಇನ್ ಸ್ಟಾಗ್ರಾಮ್.ಟೆಲಿಗ್ರಾಮ್ ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ.ಹಂಚಿಕೊಳ್ಳುವ ಮೂಲಕ.ಆರಂಭಿಕ ವೀಕ್ಷಣೆಯನ್ನು.ಹೆಚ್ಚು ಮಾಡಬಹುದು.
.ಅಪ್ ಡೇಟ್ ಆಗಿರಿ:
ತಂತ್ರಜ್ಞಾನ.ಮತ್ತು ಗೂಗಲ್.ಅಲ್ಗಾರಿದಮ್ ಗಳು.ಬದಲಾಗುತ್ತಿರುತ್ತದೆ.ಹೊಸ ವಿಷಯಗಳನ್ನು ಕಲಿಯುತ್ತಾ ನಿಮ್ಮ ಹಳೆಯ ಲೇಖನಗಳನ್ನು ಅಪ್ ಡೇಟ್ ಮಾಡುತ್ತೀರಿ.
ಉತ್ತಮವಾದ ಮಾಹಿತಿ:
2026ರಲ್ಲಿಯೂ ಬ್ಲಾಗಿಂಗ್ ಒಂದು ಉತ್ತಮವಾದ ಕರಿಯರ್ ಆಯ್ಕೆಯಾಗಿದೆ.ಪ್ರಾದೇಶಿಕ ಭಾಷೆಗಳಲ್ಲಿ.ಕನ್ನಡದಲ್ಲಿ)ಬ್ಲಾಗ್ ಮಾಡುವವರಿಗೆ ಈಗ ಗೂಗಲ್ ನಲ್ಲಿ ಸ್ವರದಿ ಕಡಿಮೆ ಇರುವುದರಿಂದ.ಯಶಸ್ಸಿನ ಅವಕಾಶಗಳು ಹೆಚ್ಚಿವೆ ಆರಂಭದಲ್ಲಿ ಮೂರರಿಂದ ಆರು ತಿಂಗಳು ಯಾವುದೇ ಆದಾಯದ ನಿರೀಕ್ಷೆಯಿಲ್ಲದೆ ಕೇವಲ ಉತ್ತಮ ಮಾಹಿತಿ ನೀಡುವುದರತ್ತ ಗಮನ ಹರಿಸಬೇಕು ಒಮ್ಮೆ ನಿಮ್ಮ ವೆಬ್ ಸೈಟ್ ಗೆ ಗೂಗಲ್ ನಿಂದ ಜನರು ಬರಲು ಆರಂಭಿಸಿದರೆ ನೀವು ನಿದ್ದೆ ಮಾಡುತ್ತಿದ್ದರು ನಿಮ್ಮ ಖಾತೆಗೆ ಹಣ ಹರಿದು ಬರುತ್ತದೆ.(Passive income).https://nammasuddivartha.com/students-earn-money-from-hom-kannada/
ಇವತ್ತೇ ನಿಮ್ಮ ಡೊಮೈನ್ ಬುಕ್ ಮಾಡಿ ನಿಮ್ಮ ಬ್ಲಾಗಿಂಗ್ಜ ರ್ನಿಯನ್ನು ಆರಂಭಿಸಿ ಶುಭವಾಗಲಿ.!

