ಇಂದಿನ ಡಿಜಿಟಲ್ ಯುಗದಲ್ಲಿ.ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಮನೆಯಲ್ಲೇ ಕುಳಿತು ಹಣ ಗಳಿಸುವ ಅವಕಾಶಗಳನ್ನು ಬಳಸಿಕೊಳ್ಳಬಹುದು.ಮೊಬೈಲ್, ಲ್ಯಾಪ್ಟಾಪ್, ಇಂಟರ್ನೆಟ್ ಸಂಪರ್ಕವಿದ್ದರೆ ಕೆಲವು ಕೆಲಸಗಳನ್ನು ಮನೆಯಿಂದಲೇ ಮಾಡಬಹುದು. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸಲು ಸಹಾಯವಾಗುತ್ತದೆ.ಇಲ್ಲಿಗೆ ಹೊಸ ಕೌಶಲ್ಯಗಳನ್ನು ಕಲಿತು ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಅನುಭವ ಸಿಗುತ್ತದೆ ಮತ್ತು ಆದಾಯನು ಬರುತ್ತದೆ.
ಆದರೆ ಮನೆಯಲ್ಲೇ ಕುಳಿತು ಹಣ ಗಳಿಸುವುದು ಎಂದರೆ ಯಾವುದೇ ಕೆಲಸ ಮಾಡಿದೆ. ಹಣ ಸಿಗುತ್ತದೆ ಎಂದರ್ಥವಲ್ಲ.ಸಮಯ, ಪರಿಶ್ರಮ, ತಾಳ್ಮೆ ಮತ್ತು ಸರಿಯಾದ ಕೌಶಲ್ಯಗಳು ಅಗತ್ಯವಾಗಿವೆ. ಹಾಗಾದರೆ ವಿದ್ಯಾರ್ಥಿಗಳು ಯಾವೆಲ್ಲ ಮಾರ್ಗಗಳಲ್ಲಿ ಹಣ ಗಳಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.
1.ಆನ್ ಲೈನ್ ಟ್ಯೂಷನ್ ಮೂಲಕ ಹಣ ಗಳಿಸಿ.
ಚೆನ್ನಾಗಿ ತಿಳಿದಿರುವ ವಿಷಯಗಳನ್ನು ಇತರೆ ವಿದ್ಯಾರ್ಥಿಗಳಿಗೆ ಕಳುಹಿಸುವುದು ಹಣ ಗಳಿಸಲು ಉತ್ತಮ ಮಾರ್ಗವಾಗಿದೆ. ಉದಾಹರಣೆಗೆ ನಿಮಗೆ ವಿಜ್ಞಾನ, ಗಣಿತ, ಕನ್ನಡ ವಿಷಯಗಳಲ್ಲಿ ಉತ್ತಮ ಜ್ಞಾನವಿದ್ದರೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪಾಠ ಮಾಡಬಹುದು.
ಮೊಬೈಲ್ ಮೂಲಕ ವಿಡಿಯೋ ಕರೆ ಮಾಡಿ ಪಾಠ ಹೇಳಬಹುದು.
ನಿಮ್ಮ ಊರಿನ ಮಕ್ಕಳಿಗೆ ಮನೆಯಲ್ಲಿ ಟ್ಯೂಷನ್ ನೀಡುವ ಮೂಲಕ ಆದಾಯ ಗಳಿಸಬಹುದು.ಮತ್ತೆ ಅನುಭವವನ್ನು ಬಂದಂತಾಗುತ್ತದೆ.
ಆರಂಭದಲ್ಲಿ ಕಡಿಮೆ ಸಂಖ್ಯೆಯು ವಿದ್ಯಾರ್ಥಿಗಳೊಂದಿಗೆ ಆರಂಭಿಸಿ ಉತ್ತಮವಾಗಿ ಕಲಿಸಿದರೆ ಹೆಚ್ಚಿನ ವಿದ್ಯಾರ್ಥಿಗಳನ್ನು ಪಡೆಯಬಹುದು ಮತ್ತು ಮುಂದೆ ಹೆಚ್ಚಿನ ವಿದ್ಯಾರ್ಥಿಗಳಿಂದ ಹೆಚ್ಚು ಆದಾಯ ಬರುವ ನಿರೀಕ್ಷೆಯನ್ನು ಹೊಂದುತ್ತೇವೆ.
2.ಕನ್ನಡದಲ್ಲಿ ಲೇಖನ ಬರೆಯುವ ಮೂಲಕ ಆದಾಯ.
ಕನ್ನಡದಲ್ಲಿ ಬರೆಯುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಕಂಟೆಂಟ್ ರೈಟಿಂಗ್ ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ.ವೆಬ್ ಸೈಟ್ ಗಳಿಗೆ ಶಿಕ್ಷಣ.ಕೃಷಿ ತಂತ್ರಜ್ಞಾನ, ಉದ್ಯೋಗ ಮಾಹಿತಿ ಮತ್ತು ಸಾಮಾನ್ಯ ಜ್ಞಾನದ ವಿಷಯಗಳನ್ನು ಕುರಿತು ಲೇಖನಗಳನ್ನು ಬರೆಯುವುದು ಮತ್ತು ಪೋಸ್ಟ್ ಮಾಡುವುದರಿಂದ ಬೇರೆ ಮೂಲಗಳಿಂದ ಆದಾಯವನ್ನು ಪಡೆಯಬಹುದು.
ಕೆಲವು ವೆಬ್ ಸೈಟ್ ಗಳು ಮತ್ತು ಡಿಜಿಟಲ್ ಮಾಧ್ಯಮಗಳು ಗುಣಮಟ್ಟದ ಲೇಖನಗಳನ್ನು ಬರೆಯುವವರಿಗೆ ಹಣ ನೀಡುತ್ತವೆ.ಆದರೆ ಕೆಲಸ ಆರಂಭಿಸುವ ಮೊದಲು ಪಾವತಿ ವಿಧಾನ ಬರವಣಿಗೆಯ ನಿಯಮಗಳು ಮತ್ತು ಲೇಖನದ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು.
ಸ್ವಂತ ಬ್ಲಾಗ್ ಆರಂಭಿಸುವುದು ಮತ್ತೊಂದು ಆಯ್ಕೆಯಾಗಿದೆ.ಉದಾಹರಣೆಗೆ ವಿದ್ಯಾರ್ಥಿ ವೇತನ ಪರೀಕ್ಷೆ, ಸಿದ್ಧತೆ, ಮತ್ತೊಂದು ಉದ್ಯೋಗಾವಕಾಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಪ್ರಕಟಿಸಿ ಪ್ರಚಾರ ಮಾಡಬಹುದು.
ಆದರೆ ಸ್ವಂತ ಬ್ಲಾಗ್ ನಿಂದ ತಕ್ಷಣವೇ ಹಣ ಬರುತ್ತದೆ ಎಂದು ನಿರೀಕ್ಷಿಸಬಾರದು.ಓದುಗರನ್ನು ಗಳಿಸಲು.ಸಮಯ ಬೇಕಾಗುತ್ತದೆ ಹಾಗೂ ನಿರಂತರ ಶ್ರಮ ಮುಖ್ಯವಾಗಿರುತ್ತದೆ.
3.ಯೂಟ್ಯೂಬ್ ವಿಡಿಯೋಗಳ ಮೂಲಕ ಹಣ ಗಳಿಸಿ.
ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಬಹುದು. ಉದಾಹರಣೆಗೆ ಪರೀಕ್ಷಾ ಸಿದ್ಧತೆಯ ಸಲಹೆಗಳು.
. ಗಣಿತದ ಸುಲಭ ವಿಧಾನಗಳು.
.ಇಂಗ್ಲಿಷ್ ಕಲಿಯುವ ಪಾಠಗಳು.
.ಮೊಬೈಲ್ ಮತ್ತು ತಂತ್ರಜ್ಞಾನದ ಮಾಹಿತಿ.
.ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಅಧ್ಯಯನ ಸಲಹೆಗಳು.
ಆರಂಭದಲ್ಲಿ ಮೊಬೈಲ್ ಕ್ಯಾಮೆರಾ ಬಳಸಿ ವಿಡಿಯೋಗಳನ್ನು ಮಾಡಬಹುದು. ದುಬಾರಿ ಕ್ಯಾಮರಾ ಖರೀದಿಸುವ ಅಗತ್ಯವಿಲ್ಲ.ಯೂಟ್ಯೂಬ್ ನ ಹಣಗಳಿಕೆಗೆ ನಿಯಮಗಳನ್ನು ಪೂರೈಸಿದ ನಂತರ ಜಾಹೀರಾತುಗಳಿಂದ ಆದಾಯ ಗಳಿಸುವ ಅವಕಾಶವಿದೆ.ಆದರೆ ಚಾನೆಲ್ ಆರಂಭಿಸಿದ ತಕ್ಷಣ ಹಣ ಸಿಗುವುದಿಲ್ಲ.ಇತರರ ವೀಡಿಯೊಗಳನ್ನು ಅನುಮತಿ ಇಲ್ಲದೆ ಬಳಸುವುದನ್ನು ತಪ್ಪಿಸಬೇಕು.ಸ್ವಂತ ವಿಷಯ ಮತ್ತು ಸ್ವಂತ ವಿವರಣೆಗೆ ಆದ್ಯತೆ ನೀಡಬೇಕು.ಹಾಗೂ ಸ್ವಂತ ಬರವಣಿಗೆ ಹೊಂದಬೇಕು.
4. ಗ್ರಾಫಿಕ್ ಡಿಸೈನ್ ಕಲಿಯಿರಿ.
ವಿದ್ಯಾರ್ಥಿಗಳು ಗ್ರಾಫಿಕ್ ಡಿಸೈನ್ ಕಲಿತು ಮನೆಯಿಂದಲೇ ಕೆಲಸ ಮಾಡಬಹುದು.ಪೋಸ್ಟರ್ ಯೂಟ್ಯೂಬ್.ಥಂಬ್ ನೈಲ್ ಸಾಮಾಜಿಕ ಮಾಧ್ಯಮದ ಚಿತ್ರಗಳು ಮತ್ತು ಜಾಹೀರಾತುಗಳು ವಿನ್ಯಾಸಗಳಿಗೆ ಬೇಡಿಕೆ ತುಂಬಾ ಇದೆ. ಆರಂಭದಲ್ಲಿ ಉಚಿತ ವಿನ್ಯಾಸ ಸಾಧನಗಳನ್ನು ಬಳಸಿ ಅಭ್ಯಾಸ ಮಾಡಬಹುದು.ನಂತರ ತಮ್ಮದೇ ಆದ ಮಾದರಿ ವಿನ್ಯಾಸಗಳನ್ನು ಸಿದ್ಧಪಡಿಸಿ ಸ್ಥಳೀಯ ಅಂಗಡಿಗಳು, ಸಣ್ಣ ಮಾಧ್ಯಮಗಳು ಮತ್ತು ಕಂಟೆಂಟ್ ಕ್ರಿಯೇಟ್ಗಳಿಗೆ ಸೇವೆ ನೀಡಬಹುದು. ಹಣವನ್ನು ಗಳಿಸಬಹುದು.
ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು ಮತ್ತು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
5.ವಿಡಿಯೋ ಎಡಿಟಿಂಗ್ ಮೂಲಕ ಹಣ ಗಳಿಸಿ.
ಇವತ್ತಿನ ದಿನಗಳಲ್ಲಿ ಯೂಟ್ಯೂಬ್ ವೀಡಿಯೋಗಳು, ಇನ್ಸ್ಟಾಗ್ರಾಮ್ ರೀಲ್ಸ್ ಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳಿಗೆ ವೀಡಿಯೊ ಎಡಿಟಿಂಗ್ ಅಗತ್ಯವಿದೆ.
ವಿದ್ಯಾರ್ಥಿಗಳು.ಮೊಬೈಲ್ನಲ್ಲಿಯೇ ವೀಡಿಯೋ ಎಡಿಟಿಂಗ್ ಕಲಿತು ಹಣ ಗಳಿಸಬಹುದು.ವಿಡಿಯೋ ಕತ್ತರಿಸುವುದು, ಬರಹ ಸೇರಿಸುವುದು, ಧ್ವನಿ ಸರಿಪಡಿಸುವುದು ಮತ್ತು ಉಪ ಶೀರ್ಷಿಕೆ
ಗಳನ್ನು ಸೇರಿಸುವುದನ್ನು ಅಭ್ಯಾಸ ಮಾಡಬಹುದು.ನಂತರ ವಿಡಿಯೋ ಕ್ರಿಯೇಟರ್ ಗಳು ಮತ್ತು ಸ್ಥಳೀಯ ಉದ್ಯಮಗಳಿಗೆ ಎಡಿಟಿಂಗ್ ಸೇವೆ ನೀಡಿ ಹಣ ಪಡೆಯಬಹುದು.ಆದರೆ ಮೊದಲು ಉತ್ತಮ ಕೌಶಲ್ಯ ಬೆಳೆಸಿಕೊಳ್ಳುವುದು ಉತ್ತಮ ಕೆಲಸ ಸಿಕ್ಕರೆ ಮಾತ್ರ ಆದಾಯ ಬರುತ್ತದೆ ಎಂಬುದು ನೆನಪಿನಲ್ಲಿ ಇಡಬೇಕು.
6ಡೇಟಾ ಎಂಟ್ರಿ ಕೆಲಸದ ಬಗ್ಗೆ ತಿಳಿದುಕೊಳ್ಳಿ.
ಕೆಲವು ಸಂಸ್ಥೆಗಳಲ್ಲಿ ಕಂಪ್ಯೂಟರ್ಗಳಲ್ಲಿ ಮಾಹಿತಿಯನ್ನು ನಿಲ್ಲಿಸುವುದು, ದಾಖಲೆಗಳನ್ನು ಸರಿಪಡಿಸುವುದು ಮತ್ತು ಪಟ್ಟಿ ಗಳನ್ನು ಸಿದ್ಧಪಡಿಸುವಂತಹ ಕೆಲಸಗಳಿರುತ್ತವೆ.
ಇಂತಹ ಕೆಲಸಗಳಿಗೆ ಸಾಮಾನ್ಯವಾಗಿ ಟೈಪಿಂಗ್, ಕಂಪ್ಯೂಟರ್ ಬಳಕೆ ಮತ್ತು ನಿಖರತೆಯ ಅಗತ್ಯವಿರುತ್ತದೆ.ಆದರೆ ಡೇಟಾ ಎಂಟ್ರಿ ಹೆಸರಿನಲ್ಲಿ ಅನೇಕ ವಂಚನೆಗಳು ನಡೆಯುತ್ತವೆ.ಕೆಲಸ ನೀಡುವ ಮೊದಲು ನೋಂದಣಿ ಶುಲ್ಕ ಭದ್ರತಾ ಠೇವಣಿ ಅಥವಾ ತರಬೇತಿ ಶುಲ್ಕ ಘೋಷಿಸಬೇಕೆಂದು ಒತ್ತಾಯಿಸುವರ ಬಗ್ಗೆ ಎಚ್ಚರವಹಿಸಿ.
ಸಂಸ್ಥೆಯ ಅಧಿಕೃತ ವಿವರಗಳನ್ನು ಪರಿಶೀಲಿಸಿ.ವರ್ಷದ ಷರತ್ತುಗಳನ್ನು ಮತ್ತು ಪಾವತಿಯ ನಿಯಮಗಳನ್ನು ಓದಿದ ನಂತರವೇ ಒಪ್ಪಿಕೊಂಡು ಕೆಲಸ ಮಾಡಿ.
7.ಫ್ರೀಲ್ಯಾನ್ಸಿಂಗ್ ಮೂಲಕ ಸೇವೆ ನೀಡಿ
ಫ್ರೀಲ್ಯಾನ್ಸಿಂಗ್ ಎಂದರೆ.ನಿಮ್ಮ ಕೌಶಲ್ಯವನ್ನು ಬಳಸಿಕೊಂಡು ವಿವಿಧ ಗ್ರಾಹಕರಿಗೆ ಕೆಲಸ ಮಾಡಿಕೊಡುವುದು.
ವಿದ್ಯಾರ್ಥಿಗಳು ಈ ಕೆಳಗಿನ ಸೇವೆಗಳನ್ನು ನೀಡಬಹುದು.
.ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಟೈಪಿಂಗ್.
.ಲೇಖನ, ಬರವಣಿಗೆ.
. ಪೋಸ್ಟರ್ ವಿನ್ಯಾಸ.
.ವಿಡಿಯೋ ಎಡಿಟಿಂಗ್.
.ಪ್ರೆಸೆಂಟೇಷನ್ ತಯಾರಿಕೆ.
.ವೆಬ್ ಸೈಟ್ ವಿನ್ಯಾಸ.
ಕೆಲವು ಫ್ರೀಲ್ಯಾನ್ಸಿಂಗ್ ವೇದಿಕೆಗಳಲ್ಲಿ ಗ್ರಾಹಕರು ಹುಡುಕಬಹುದು. ಆದರೆ ಖಾತೆ ತೆರೆಯುವ ಮೊದಲು ವಯಸ್ಸಿನ ನಿಯಮಗಳು, ಶುಲ್ಕಗಳು ಮತ್ತು ಪಾವತಿ ವಿಧಾನಗಳನ್ನು ಪರಿಶೀಲಿಸಿ ನಡೆಯಬೇಕು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪೋಷಕರ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿ ಕೆಲಸದ ಅವಕಾಶಗಳನ್ನು ಹುಡುಕುವುದು ಉತ್ತಮ.
8.ಡಿಜಿಟಲ್ ಉತ್ಪನ್ನಗಳನ್ನು ತಯಾರಿಸಿ.
ವಿದ್ಯಾರ್ಥಿಗಳು ತಮ್ಮದೇ ಆದ ಡಿಜಿಟಲ್ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದು.
ಉದಾಹರಣೆಗೆ:
.ಪ್ರೆಸೆಂಟೇಷನ್ ಪಾಂಪ್ಲೆಟ್ಸ್ ಗಳು.
.ಸ್ವಂತ ಅಧ್ಯಯನ, ಯೋಜನಾ ಮಾದರಿಗಳು.
.ಭಾಷಾ ಕಲಿಕೆಯ ಅಭ್ಯಾಸ ಪತ್ರಿಕೆಗಳು.
.ಓದಿನ ವೇಳಾಪಟ್ಟಿ.
.ವಿಶ್ವ ಸಿದ್ಧತೆಯ ಮೂಲ ಟಿಪ್ಪಣಿಗಳು.
ಇವುಗಳನ್ನು ತಯಾರಿಸಲು ಸಮಯ ಮತ್ತು ಕೌಶಲ್ಯ ಬೇಕಾಗುತ್ತದೆ.ಮಾರಾಟಕ್ಕೆ ಬಳಸುವ ವೇದಿಕೆಯ ನಿಯಮಗಳು ಹಾಗೂ ಪಾವತಿ ವ್ಯವಸ್ಥೆಯನ್ನು ಮೊದಲು ತಿಳಿದುಕೊಳ್ಳಬೇಕು.ಇತರರ ಪುಸ್ತಕಗಳು, ಪಾಠದ ಟಿಪ್ಪಣಿಗಳು ಅಥವಾ ಕೃತಿ ಸೌಮ್ಯ ಹೊಂದಿರುವ ವಸ್ತುಗಳನ್ನು ಅನುಮತಿ ಇಲ್ಲದೆ ಮಾರಾಟ ಮಾಡಬಾರದು.ಹಾಗೂ ಇದು ಅಪರಾಧವಾಗುತ್ತದೆ.
9.ಅಪೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ತಿಳಿಯಿರಿ.
ಅಪೀಲಿಯೇಟ್ ಮಾರ್ಕೆಟ್ ನಲ್ಲಿ ಒಂದು ಕಂಪನಿಯ ಉತ್ಪನ್ನ ಅಥವಾ ಸೇವೆಯ ವಿಶೇಷ ಲಿಂಕ್ ಹಂಚಿಕೊಳ್ಳಲಾಗುತ್ತದೆ.ಲಿಂಕ್ ಮೂಲಕ ಅರ್ಹ ಖರೀದಿ ಪಡೆ ನಡೆದರೆ ಆಯೋಗ ಸಿಗುವ ಸಾಧ್ಯತೆಯೂ ಸಿಗುತ್ತದೆ.
ವಿದ್ಯಾರ್ಥಿಗಳು ತಮ್ಮ ಬ್ಲಾಗಿಂಗ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪುಸ್ತಕಗಳು, ಅಧ್ಯಯನ ಸಾಮಗ್ರಿಗಳು ಮತ್ತು ಉಪಯುಕ್ತ ಉತ್ಪನ್ನಗಳ ಬಗ್ಗೆ ಪ್ರಾಮಾಣಿಕ ಮಾಹಿತಿ ಹಂಚಿಕೊಳ್ಳಬಹುದು.ಆದರೆ ಇದರಿಂದ ಹಣ ಗಳಿಸಲು ಓದುಗರ ವಿಶ್ವಾಸ, ಸೂಕ್ತ ಉತ್ಪನ್ನಗಳು ಮತ್ತು ನೈಜ ಖರೀದಿಗಳು ಅಗತ್ಯವಾಗಿರುತ್ತವೆ.
ಇದು ತಕ್ಷಣ ಹಣ ನೀಡುವ ವಿಧಾನವಲ್ಲ.ಪ್ರಚಾರದ ಲಿಂಕ್ ಬಳಸಲಾಗಿದೆ ಎಂಬುದನ್ನು ಓದುಗರಿಗೆ ಸ್ಪಷ್ಟವಾಗಿ ತಿಳಿಸಬೇಕು.
10.ಸ್ವಂತ ಬ್ಲಾಗ್ ಆರಂಭಿಸಿ.
ಬರವಣಿಗೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸ್ವಂತ ಬ್ಲಾಗ್ ದೀರ್ಘಕಾಲದ ಅವಕಾಶವಾಗಬಹುದು.ವರ್ಡ್ ಪ್ರೆಸ್ ಅಥವಾ ಇತರ ಬ್ಲಾಗಿಂಗ್ ವೇದಿಕೆಗಳಲ್ಲಿ ವೆಬ್ ಸೈಟ್ ಆರಂಭಿಸಬಹುದು.ಶಿಕ್ಷಣ ವಿದ್ಯಾರ್ಥಿ ವೇತನ ಪರೀಕ್ಷೆಗಳು, ತಂತ್ರಜ್ಞಾನ, ಕೃಷಿ ಮತ್ತು ಉದ್ಯೋಗ ಮಾಹಿತಿಯಂತಹ ವಿಷಯಗಳನ್ನು ಆಯ್ಕೆ ಮಾಡಬಹುದು.ಅತೀ ಲೇಖನದಲ್ಲಿಯೂ ಓದುಗರಿಗೆ ಉಪಯುಕ್ತವಾದ ನಿಖರವಾದ ಮತ್ತು ಸಾಧ್ಯವಾದಷ್ಟು ಮೂಲ ಮಾಹಿತಿಯನ್ನು ನೀಡಬೇಕು.ಹುಡುಕಾಟ ಯಂತ್ರಗಳಲ್ಲಿ ಲೇಖನಗಳು ಕಾಣಿಸಿಕೊಳ್ಳಲು ಸಮಯ ಬೇಕಾಗಬಹುದು. ಗೂಗಲ್ ಆಡ್ ಸೆನ್ಸ್ ಮೂಲಕ ಹಣ ಗಳಿಸಲು ಅದರ ಅರ್ಹತಾ ನಿಯಮಗಳನ್ನು ಮತ್ತು ನೀತಿಗಳನ್ನು ಪೂರೈಸಬೇಕು. ಜಾಹೀರಾತು ಅನುಮೋದನೆ ಸಿಕ್ಕರೂ ಆದಾಯ ಖಚಿತವಲ್ಲ ಅದು ನಿಮ್ಮ ಬರವಣಿಗೆ ಮೇಲೆ ಹೋಗುತ್ತದೆ.
ವಿದ್ಯಾರ್ಥಿಗಳು ದಿನಕ್ಕೆ ಇಷ್ಟು ಹಣ ಗಳಿಸಬಹುದು?
ವಿದ್ಯಾರ್ಥಿಗಳು ಇಷ್ಟು ಹಣ ಗಳಿಸುತ್ತಾರೆ ಎಂಬುದು ಅವರ ಕೌಶಲ್ಯ ಮತ್ತು ಕೆಲಸದ ಸಮಯ. ಗ್ರಾಹಕರ ಸಂಖ್ಯೆ ಹಾಗೂ ಕೆಲಸದ ಲಭ್ಯತೆಯನ್ನು ಅವಲಂಬಿಸಿರುತ್ತದೆ.
ಆನ್ ಲೈನ್ ಟ್ಯೂಷನ್ ಬರವಣಿಗೆ, ವಿಡಿಯೋ ಎಡಿಟಿಂಗ್ ಮತ್ತು ವಿನ್ಯಾಸ ಕೆಲಸಗಳಿಂದ ಆದಾಯ ಗಳಿಸುವ ಸಾಧ್ಯತೆ ಇದೆ.ಆದರೆ ಎಲ್ಲರಿಗೂ ಒಂದೇ ರೀತಿಯ ಆದಾಯ ಸಿಗುವುದಿಲ್ಲ.ಯಾವುದೇ ಕೆಲಸ ಆರಂಭಿಸುವ ಮೊದಲು ಅದರ ಷರತ್ತುಗಳನ್ನು ತಿಳಿದುಕೊಳ್ಳಿ ದಿನಕ್ಕೆ.500 ಅಥವಾ 1000 ಖಚಿತವಾಗಿ ಸಿಗುತ್ತದೆ ಎಂಬ ಜಾಹೀರಾತುಗಳನ್ನು ನಂಬುವ ಮೊದಲು ಎಚ್ಚರಿಕೆಯಿಂದ ಪರಿಶೀಲಿಸಿ ನಡೆಯಿರಿ.
ಆನ್ಲೈನ್ನಲ್ಲಿ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
ಮನೆಯಲ್ಲೇ ಕುಳಿತು ಹಣ ಗಳಿಸುವ ಅವಕಾಶಗಳನ್ನು ಹುಡುಕುವಾಗ ಕೆಲವು ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು.
.ಕೆಲಸ ಪಡೆಯಲು ಮುಂಗಡ ಹಣ ಪಾವತಿಸಬೇಡಿ.
.ಒಟಿಪಿ ಪಾಸ್ ವರ್ಡ್ ಮತ್ತು ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
. ಕಂಪನಿಯ ಅಧಿಕೃತ ವೆಬ್ ಸೈಟ್ ಮತ್ತು ಸಂಪರ್ಕ ವಿವರಗಳನ್ನು ಪರಿಶೀಲಿಸಿ.
.ಕೆಲಸದ ಸ್ವರೂಪ ಮತ್ತು ಪಾವತಿ ನಿಯಮಗಳನ್ನು ಲಿಖಿತವಾಗಿ ತಿಳಿದುಕೊಳ್ಳಿ.
. ಅತಿಯಾದ ಆದಾಯದ ಭರವಸೆ ನೀಡುವ ಯೋಜನೆಗಳ ಬಗ್ಗೆ ಎಚ್ಚರದಿಂದಿರಿ ಹಾಗೂ ಮೋಸ ಹೋಗಬೇಡಿ.
.ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಪೋಷಕರ ಸಲಹೆ ಪಡೆದು ಕೆಲಸ ಮಾಡಿ.
ಕೊನೆಯ ಮಾತು
ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಹಣ ಗಳಿಸಲು ಕೆಲವು ಮಾರ್ಗಗಳಿವೆ. ಟ್ಯೂಷನ್, ಲೇಖನ ಬರವಣಿಗೆ, ಯೂಟ್ಯೂಬ್ ವಿಡಿಯೋ ಎಡಿಟಿಂಗ್ ,ಗ್ರಾಫಿಕ್, ಡಿಸೈನ್ ಮತ್ತು ಫ್ರೀಲೈಸಿಂಗ್ ಕೆಲವು ಪ್ರಮುಖವಾದವು.ಆದರೆ ಹಣ ಗಳಿಸುವುದಕ್ಕಿಂತ ಮೊದಲು ಕೌಶಲ್ಯ ಕಲಿಯುವುದು ಮುಖ್ಯ.ಕುಟುಂಬದಲ್ಲಿ ಸಣ್ಣ ಕೆಲಸಗಳಿಂದ ಅನುಭವ ಪಡೆದು ನಂತರ ಅವಕಾಶಗಳನ್ನು ವಿಸ್ತರಿಸಬೇಕು.ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಿ.ಸರಿಯಾದ ಮಾಹಿತಿ. ಪರಿಶ್ರಮ ಮತ್ತು ತಾಳ್ಮೆಯಿಂದ ಮನೆಯಿಂದಲೇ ಕುಳಿತು ಆದಾಯ ಗಳಿಸುವ ಪ್ರಯತ್ನಮಾಡಬಹುದು.
ನಮ್ಮ ಮಾಹಿತಿ ನಿಮಗೆ ಇಷ್ಟವಾದರೆ ಕಮೆಂಟ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ.

