ಇವತ್ತಿನ ಕಾಲದಲ್ಲಿ ಮೊಬೈಲ್ ಇಲ್ಲದ ಮನೆ ಸಿಗೋದು ಕಷ್ಟ ಹಳ್ಳಿಯಿಂದ ಹಿಡಿದು ಪಟ್ಟಣದವರೆಗೆ ಎಲ್ಲರೂ ಮೊಬೈಲ್ ಬಳಸುತ್ತಾರೆ.ಏನಾದರೂ ಹೊಸ ಸುದ್ದಿ ತಿಳಿದುಕೊಳ್ಳಬೇಕು ಅಂದರೆ ತಕ್ಷಣ ಗೂಗಲ್ ನಲ್ಲಿ ಹುಡುಕುತ್ತಾರೆ.ರೈತರಿಗೆ ಮಳೆ ಮಾಹಿತಿ ಬೇಕು, ಯುವಕರಿಗೆ ಉದ್ಯೋಗದ ಮಾಹಿತಿ ಬೇಕು. ಇನ್ನು ಕೆಲವರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಇಂತಹ ಜನರಿಗೆ ಸರಿಯಾದ ಮಾಹಿತಿ ಕೊಡುವ ವೆಬ್ಸೈಟ್ ಇದ್ದರೆ ಅದಕ್ಕೆ ಒಳ್ಳೆಯ ಓದುಗರರು ಸಿಗಬಹುದು.
ಆದರೆ ವೆಬ್ಸೈಟ್ ಶುರು ಮಾಡಿದ ತಕ್ಷಣ ಸಾವಿರಾರು ಜನ ಬಂದು ಓದುತ್ತಾರೆ ಅಂತ ಅಂದುಕೊಳ್ಳಬಾರದು.ಅದಕ್ಕೆ ಸ್ವಲ್ಪ ಸಮಯ, ತಾಳ್ಮೆ ಮತ್ತು ಸರಿಯಾದ ಪ್ರಯತ್ನ ಬೇಕಾಗುತ್ತದೆ.ನಿಮ್ಮ ವೆಬ್ ಸೈಟ್ ಗೆ ಹೆಚ್ಚು ಜನರು ಬರಬೇಕಾದರೆ ಏನೆಲ್ಲ ಮಾಡಬೇಕು ಅಂತ ಈ ಲೇಖನದಲ್ಲಿ ಸರಳವಾಗಿ ತಿಳಿಯೋಣ.
1. ಜನರಿಗೆ ಬೇಕಾದ ವಿಷಯಗಳ ಬಗ್ಗೆ ಲೇಖನ ಬರೆಯಿರಿ.
ವೆಬ್ ಸೈಟ್ ಗೆ ಟ್ರಾಫಿಕ್ ಬರಬೇಕಾದರೆ?ಮೊದಲು ಜನರಿಗೆ ಯಾವ ವಿಷಯದ ಬಗ್ಗೆ ತೆಗೆದುಕೊಳ್ಳುವ ಆಸಕ್ತಿ ಇದೆ ಅನ್ನೋದು ಅರ್ಥ ಮಾಡಿಕೊಳ್ಳಬೇಕು.ಉದಾಹರಣೆಗೆ ನಮ್ಮ ಕರ್ನಾಟಕದಲ್ಲಿ ರೈತರಿಗೆ ಮಳೆ ಯಾವಾಗ ಬರುತ್ತೆ?ಯಾವ ಬೆಳೆ ಹಾಕಿದರೆ ಲಾಭ ಸಿಗುತ್ತೆ.ಬೆಳೆಗಳಿಗೆ ಯಾವ ಗೊಬ್ಬರ ಹಾಕಬೇಕು ಅನ್ನುವ ಪ್ರಶ್ನೆಗಳು ಇರುತ್ತವೆ.
ಹೀಗಾಗಿ ನಿಮ್ಮ ವೆಬ್ ಸೈಟ್ ನಲ್ಲಿ ಇಂತಹ ಉಪಯುಕ್ತ ವಿಷಯಗಳ ಬಗ್ಗೆ ಲೇಖನ ಬರೆಯಬಹುದು.
ಉದಾಹರಣೆಗೆ.
.ಹವಾಮಾನ ಮತ್ತು ಮಳೆ ಮುನ್ಸೂಚನೆ.
.ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಮಾಹಿತಿ.
.ಯೋಜನೆಗಳ ಅರ್ಹತೆ ಮತ್ತು ಅರ್ಜಿ ವಿಧಾನ.ಹೊಸ ಉದ್ಯೋಗ ಅಧಿಸೂಚನೆಗಳು.ವಿದ್ಯಾರ್ಥಿಗಳಿಗೆ ಪರೀಕ್ಷೆ ಮತ್ತು ವಿದ್ಯಾಭ್ಯಾಸದ ಮಾಹಿತಿ.
. ಜನಸಾಮಾನ್ಯರಿಗೆ ಉಪಯುಕ್ತವಾದ ತಂತ್ರಜ್ಞಾನ ಮಾಹಿತಿ.
2.ಗೂಗಲ್ ನಲ್ಲಿ ಜನರು ಹುಡುಕುವ ಪದಗಳನ್ನು ಬಳಸಿ.
ನಿಮ್ಮ ವೆಬ್ ಸೈಟ್ ಗೆ ಜನರು ಬರಬೇಕಾದರೆ ಗೂಗಲ್ ನಲ್ಲಿ ನಿಮ್ಮ ಲೇಖನ ಕಾಣಿಸಿಕೊಳ್ಳುವುದು ಮುಖ್ಯ. ಇದಕ್ಕೆ SEO ಸಹಾಯ ಮಾಡುತ್ತದೆ.ಎಸ್ ಇ ಒ ಅಂದರೆ ನಿಮ್ಮ ಲೇಖನವನ್ನು ಸರ್ಚ್ ಎಂಜಿನ್ ಗಳಿಗೆ ಸುಲಭವಾಗಿ ಅರ್ಥವಾಗುವಂತೆ ಸಿದ್ಧಿಪಡುವ ವಿಧಾನ.ಉದಾಹರಣೆಗೆ.ನೀವು ಮಳೆಯ ಬಗ್ಗೆ ಲೇಖನ ಬರೆಯುತ್ತಿದ್ದೀರಿ ಅಂತ ತಿಳಿದುಕೊಳ್ಳಿ. ಆಗ ಶೀರ್ಷಿಕೆಯನ್ನು ಕೇವಲ ಮಳೆ, ಮಾಹಿತಿ ಅಂತ ಬರೆಯುವ ಬದಲು ಕರ್ನಾಟಕದಲ್ಲಿ ಮಳೆ ಯಾವಾಗ ಬರುತ್ತದೆ? ರೈತರು ತಿಳಿಯಬೇಕಾದ ಮಾಹಿತಿ ಅಥವಾ ಬರೆಯಬಹುದು.
ಆದರೆ ಶೀರ್ಷಿಕೆಯಲ್ಲಿ ಏನು ಹೇಳುತ್ತಿರೋ ಲೇಖನದಲ್ಲೂ ಅದೇ ಸರಿಯಾದ ಮಾಹಿತಿ ಇರಬೇಕು.https://nammasuddivartha.com/students-earn-money-from-hom-kannada/
ನೀವು Rank math SEO ಬಳಸುತ್ತಿದ್ದರೆ ಈ ವಿಷಯಗಳನ್ನು ಗಮನಿಸಿ.
.ಪ್ರತಿಯೊಂದು ಲೇಖನಕ್ಕೂ.ಸರಿಯಾದ ಶೀರ್ಷಿಕೆ ಕೊಡಿ.
. ಜನರು ಹುಡುಕುವ ಮುಖ್ಯ ಪದಗಳನ್ನು ಆಯ್ಕೆ ಮಾಡಿ.
.ಲೇಖನದ ಆರಂಭದಲ್ಲೇ ವಿಷಯವನ್ನು ಸ್ಪಷ್ಟವಾಗಿ ತಿಳಿಸಿ.
.ಓದಲು ಸುಲಭವಾಗುವಂತೆ ಸಣ್ಣ ಪ್ಯಾರಾಗ್ರಾಫ್ ಅನ್ನು ಬರೆಯಿರಿ.
.ಸಂಬಂಧಿಸಿದ ಹಳೆಯ ಲೇಖನಗಳಿಗೆ ಲಿಂಕ್ ಕೊಡಿ.
SEO ಸ್ಕೋರ್ 100 ಬಂದರೆ ಮಾತ್ರ ಲೇಖನ ಗೂಗಲ್ನಲ್ಲಿ ಮೊದಲ ಸ್ಥಾನಕ್ಕೆ ಬರುತ್ತೆ ಅಂತಲ್ಲ.
ಓದುಗರರಿಗೆ.ಉಪಯುಕ್ತವಾದ ಮಾಹಿತಿ ಮುಖ್ಯ.
3.ಪ್ರತಿದಿನ ಲೇಖನ ಬರೆಯುವುದಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ಕೊಡಿ.
ಕೆಲವರು ದಿನಕ್ಕೆ ಐದು ಅಥವಾ 10 ಲೇಖನಗಳನ್ನು ಪ್ರಕಟಿಸುತ್ತಾರೆ.ಆದರೆ ಎಲ್ಲ ಲೇಖನಗಳಲ್ಲೂ ಒಂದೇ ವಿಷಯವನ್ನು ಸ್ವಲ್ಪ ಬದಲಾಯಿಸಿ ಬರೆದರೆ ಪ್ರಯೋಜನ ಕಡಿಮೆ.
ನೀವು ದಿನಕ್ಕೆ ಒಂದು ಅಥವಾ ಎರಡು ಒಳ್ಳೆಯ ಲೇಖನಗಳನ್ನು ಬರೆಯುವುದರಿಂದ ಆರಂಭಿಸಬಹುದು.ನಿಮ್ಮ ಸಮಯಕ್ಕೆ ಅನುಗುಣವಾಗಿ ಲೇಖನಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
ಸಾಮಾನ್ಯವಾಗಿ ಎಂಟುನೂರರಿಂದ 1200 ಪದಗಳ ಲೇಖನ ಒಳ್ಳೆಯ ಆರಂಭವಾಗುವುದು. ಆದರೆ ಪ್ರತಿಯೊಂದು ವಿಷಯಕ್ಕೂ ಇಷ್ಟೇ ಪದಗಳು ಇರಬೇಕು ಎನ್ನುವ ನಿಯಮವಿಲ್ಲ.
ಒಂದು ಲೇಖನ ಬರೆಯುವಾಗ ಈ ಪ್ರಶ್ನೆಗಳನ್ನು ನಿಮ್ಮಲ್ಲೇ ಕೇಳಿಕೊಳ್ಳಿ.
.ಓದುಗರಿಗೆ ಬೇಕಾದ ಉತ್ತರ ಸಿಕ್ಕಿದೆಯೇ?
.ಮಾಹಿತಿಯನ್ನು ಸರಳವಾಗಿ ವಿವರಿಸಿದ್ದೇನಾ?
. ತಪ್ಪು ಮಾಹಿತಿ ಇದೆಯಾ?
.ಶೀರ್ಷಿಕೆ ಮತ್ತು ಲೇಖನದ ವಿಷಯ ಒಂದೇ ಆಗಿದೆಯಾ?
.ಓದುಗರಿಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯವಾಗುತ್ತಿದೆಯಾ?
ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿದರೆ ನಿಮ್ಮ ಲೇಖನದ ಗುಣಮಟ್ಟ ಹೆಚ್ಚಿಸಲು ಸಹಾಯವಾಗುತ್ತದೆ.
4.Google Search console ಬಳಸಲು ಕಲಿಯಿರಿ.
ನಿಮ್ಮ ವೆಬ್ ಸೈಟ್ ಗೆ ಟ್ರಾಫಿಕ್ ಹೆಚ್ಚಿಸಬೇಕಾದರೆ ಗೂಗಲ್ ಸರ್ಚ್ ಕನ್ಸೋಲ್ ಬಹಳ ಉಪಯುಕ್ತವಾದ ಸಾಧನ.
ಇದರಲ್ಲಿ ನಿಮ್ಮ ವೆಬ್ ಸೈಟ್ ನ ಲೇಖನಗಳು ಗೂಗಲ್ ಹುಡುಕಾಟದಲ್ಲಿ ಎಷ್ಟು ಬಾರಿ ಕಾಣಿಸಿಕೊಂಡಿವೆ? ಎಷ್ಟು ಜನ ಕ್ಲಿಕ್ ಮಾಡಿದ್ದಾರೆ ಮತ್ತು ಯಾವ ಪದಗಳನ್ನು ಹುಡುಕಿ ಜನರು ನಿಮ್ಮ ವೆಬ್ಸೈಟ್ಗೆ ಬಂದಿದ್ದಾರೆ ಅನ್ನೋದನ್ನು ನೋಡಬಹುದು.
ಒಂದು ಲೇಖನಕ್ಕೆ 1000 ಬಾರಿ ಇಂಪ್ರೆಷನ್ಸ್ ಬಂದಿವೆ. ಆದರೆ 10 ಜನ ಮಾತ್ರ ಕ್ಲಿಕ್ ಮಾಡಿದ್ದಾರೆ ಅಂತ ಅಂದುಕೊಳ್ಳಿ. ಆಗ ನಿಮ್ಮ ಶೀರ್ಷಿಕೆ ವಿಷಯವನ್ನು ಸರಿಯಾಗಿ ವಿವರಿಸುತ್ತಿದೆಯೇ ಎಂದು ಪರಿಶೀಲಿಸಬೇಕು.
ಇನ್ನೊಂದು ಲೇಖನಕ್ಕೆ ಕಡಿಮೆ impression ಬಂದಿದ್ದರೆ ಆ ವಿಷಯವನ್ನು ಜನರು ಹೇಗೆ ಹುಡುಕುತ್ತಾರೆ ಅನ್ನೋದನ್ನು ಪರಿಶೀಲಿಸಿ ಲೇಖನವನ್ನು ಉತ್ತಮಪಡಿಸಬಹುದು.ಇದರಿಂದ ಯಾವ ವಿಷಯದ ಮೇಲೆ ಹೆಚ್ಚು ಕೆಲಸ ಮಾಡಬೇಕು ಅನ್ನೋದು ನಿಮಗೆ ಅರ್ಥವಾಗುತ್ತದೆ.
ಆದರೆ ಹೊಸ ವೆಬ್ಸೈಟ್ಗೆ ತಕ್ಷಣ ಹೆಚ್ಚಿನ impression ಅಥವಾ click ಬರಲೇಬೇಕು ಅಂತಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
5.ಫೇಸ್ಬುಕ್ ಮೂಲಕ ಓದುಗರನ್ನು ಹೆಚ್ಚಿಸಿಕೊಳ್ಳಿ.
ನಿಮ್ಮ ಲೇಖನಗಳನ್ನು ಜನರಿಗೆ ತಲುಪಿಸಲು ಫೇಸ್ಬುಕ್ ಕೂಡ ಒಳ್ಳೆಯ ಮಾರ್ಗ.ಉದಾಹರಣೆಗೆ ನೀವು ರೈತರಿಗಾಗಿ ಮಳೆ ಮುನ್ಸೂಚನೆ ಬಗ್ಗೆ ಲೇಖನ ಬರೆದಿದ್ದರೆ ಈ ಲೇಖನದ ಮುಖ್ಯ ಮಾಹಿತಿಯನ್ನು ಚಿಕ್ಕದಾಗಿ ಬರೆದು ಸಂಬಂಧಿಸಿದ ಫೇಸ್ಬುಕ್ ಪುಟ ಅಥವಾ ಗ್ರೂಪ್ಗಳಿಗೆ ಹಂಚಿಕೊಳ್ಳಬಹುದು.ಲೇಖನದ ಲಿಂಕ್ ಜೊತೆಗೆ ಆಕರ್ಷವಾದ ವಿಷಯಕ್ಕೆ ಒಂದು ವಿಚಿತ್ರ ಬಳಸಬಹುದು.ಆದರೆ ಜನರು ಕ್ಲಿಕ್ ಮಾಡಲಿ ಎಂದು ತಪ್ಪು ಶೀರ್ಷಿಕೆ ಕೊಡಬೇಡಿ. ಒಂದೇ ಲಿಂಕ್ ಅನ್ನು ಅನೇಕ ಗುಂಪುಗಳಲ್ಲಿ ಪದೇ ಪದೇ ಹಾಕಬೇಡಿ.ಗುಂಪಿನ ನಿಯಮಗಳನ್ನು ಪಾಲಿಸಿ.
ಓದುಗರಿಗೆ ನಿಜವಾಗಿಯೂ ಉಪಯೋಗವಾಗುವ ವಿಷಯವನ್ನು ಹಂಚಿಕೊಂಡರೆ ನಿಮ್ಮ ವೆಬ್ ಸೈಟ್ ಬಗ್ಗೆ ಜನರಿಗೆ ಪರಿಚಯವಾಗಬಹುದು.
6.ನಿಮ್ಮ ವೆಬ್ ಸೈಟ್ ಮೊಬೈಲ್ ನಲ್ಲಿ ಚೆನ್ನಾಗಿ ಕಾಣಬೇಕು.
ಇವತ್ತು ಹೆಚ್ಚಿನ ಜನರು ಮೊಬೈಲಲ್ಲೇ ಲೇಖನ ಓದುತ್ತಾರೆ. ಹೀಗಾಗಿ ನಿಮ್ಮ ವೆಬ್ಸೈಟ್ ಮೊಬೈಲಿನಲ್ಲಿ ಸರಿಯಾಗಿ ಕಾಣುವುದು ಬಹಳ ಮುಖ್ಯ.ವೆಬ್ ಸೈಟ್ ತೆರೆದಾಗ ಅಕ್ಷರಗಳು ತುಂಬಾ ಚಿಕ್ಕದಾಗಿದ್ದರೆ ಪ್ಯಾರಾಗ್ರಾಫ್ಗಳು ಸರಿಯಾಗಿ ಕಾಣದಿದ್ದರೆ ಅಥವಾ ಪುಟ ತೆರೆಯಲು ತುಂಬಾ ಸಮಯ ತೆಗೆದುಕೊಂಡರೆ ಓದುಗರು ಬೇರೆ ಕಡೆ ಹೋಗಬಹುದು.ಹೀಗಾಗಿ ಈ ವಿಷಯಗಳನ್ನು ಗಮನಿಸಿ.
.ಸರಳವಾದ ವೆಬ್ಸೈಟ್ ವಿನ್ಯಾಸಗೊಳಿಸಿ.
.ಅಕ್ಷರಗಳು ಸುಲಭವಾಗಿ ಓದಲು ಬರುವಂತಿರಲಿ.
. ಲೇಖನದ ವಿಷಯಗಳು, ಚಿತ್ರಗಳು ವಿಷಯಕ್ಕೆ ಹೊಂದುವಂತಿರಲಿ.
.ಅನಗತ್ಯ ಆ್ಯಪ್ಗಳನ್ನು ತಪ್ಪಿಸಿ.
.Pravacy Policy,About us ಮತ್ತು contact ಮುಂತಾದ ಅಗತ್ಯ ಪುಟಗಳನ್ನು ಸರಿಯಾಗಿ ಇಡಿ.
ಓದುಗರಿಗೆ ವೆಬ್ ಸೈಟ್ ಬಳಸಲು ಸುಲಭವಾಗಿದ್ದರೆ ಅವರು ಮತ್ತೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
7. ಗೂಗಲ್ ಡಿಸ್ಕವರ್ ನಲ್ಲಿ ಲೇಖನ ಕಾಣಿಸಿಕೊಳ್ಳಲು ಪ್ರಯತ್ನಿಸಿ.
Google discover ಮೂಲಕವೂ ಕೆಲವು ವೆಬ್ ಸೈಟ್ ಗಳಿಗೆ ಹೆಚ್ಚಿನ ಓದುಗರು ಸಿಗಬಹುದು.ಇದರಲ್ಲಿ ಜನರ ಆಸಕ್ತಿಗೆ ಒಂದು ಲೇಖನಗಳು ಮೊಬೈಲಿನಲ್ಲಿ ಕಾಣಿಸಿಕೊಳ್ಳಬಹುದು. ಆದರೆ ನಿಮ್ಮ ಲೇಖನ ಖಂಡಿತವಾಗಿಯೂ ಡಿಸ್ಕವರಿನಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವ ಖಾತರಿ ಇಲ್ಲ.
ಇದಕ್ಕೆ ಸಹಾಯವಾಗುವ ಕೆಲವು ಕೆಲಸಗಳು:
.ಸ್ವಂತವಾಗಿ ಬರೆದ ಮೂಲ ಲೇಖನಗಳನ್ನು ಪ್ರಕಟಿಸಿ.
. ಓದುಗರಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿ.
.ಲೇಖನಕ್ಕೆ ಒಂದು ಉತ್ತಮ ಗುಣಮಟ್ಟದ ಚಿತ್ರ ಬಳಸಿ.
. ತಪ್ಪು ಅತಿರಂಜಿತ ಶೀರ್ಷಿಕೆಯನ್ನು ತಪ್ಪಿಸಿ.
.ನಿಮ್ಮ ವೆಬ್ ಸೈಟ್ ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಿ.
ಬೇರೆ ವೆಬ್ಸೈಟ್ನ ಲೇಖನಗಳನ್ನು ನಕಲು ಮಾಡಿ ಹಾಕುವುದಕ್ಕಿಂತ ವಿಷಯವನ್ನು ಅರ್ಥಮಾಡಿಕೊಂಡು ನಿಮ್ಮದೇ ರೀತಿಯಲ್ಲಿ ಪರಿಶೀಲಿಸಿದ ಮಾಹಿತಿಯನ್ನು ಉತ್ತಮ.
8.30 ದಿನಗಳ ಸರಳ ಯೋಜನೆ ಹಾಕಿಕೊಳ್ಳಿ ವೆಬ್ ಸೈಟ್ ಗೆ ಟ್ರಾಫಿಕ್ ಹೆಚ್ಚಿಸಬೇಕೆಂದರೆ 1 ದಿನ ಕೆಲಸ ಮಾಡಿ ಫಲಿತಾಂಶಕ್ಕಾಗಿ ಕಾಯಬಾರದು. ನಿರಂತರವಾಗಿ ಪ್ರಯತ್ನಿಸಬೇಕು.ಮೊದಲ ವಾರದಲ್ಲಿ ನಿಮ್ಮ ವೆಬ್ಸೈಟ್ನ ಹಳೆಯ ಲೇಖನಗಳನ್ನು ಪರಿಶೀಲಿಸಿ ತಪ್ಪುಗಳಿದ್ದರೆ ಸರಿಪಡಿಸಿ ಶೀರ್ಷಿಕೆ ಎಸ್ ಇ ಓ ಮತ್ತು ಮೊಬೈಲ್ ವಿನ್ಯಾಸವನ್ನು ನೋಡಿ.
ಎರಡನೇ ವಾರದಲ್ಲಿ ಜನರು ಹುಡುಕುವ ಹೊಸ ವಿಷಯಗಳ ಬಗ್ಗೆ ಸಂಶೋಧನೆ ಮಾಡಿ.ಮೂರನೇ ವಾರದಲ್ಲಿ ಲೇಖನಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಿ.ಯಾವ ಲೇಖನಕ್ಕೆ ಹೆಚ್ಚು ಪ್ರತಿಕ್ರಿಯೆ ಸಿಗುತ್ತದೆ ಅನ್ನೋದನ್ನು ಗಮನಿಸಿ.ನಾಲ್ಕನೇ ವಾರದಲ್ಲಿ
Google Search console ತೆರೆದು Impression, click ಮತ್ತು ಜನರು ಹುಡುಕಿದ ಪದಗಳನ್ನು ಪರಿಶೀಲಿಸಿ.
ನಂತರ ಯಾವ ವಿಷಯಗಳು ಉತ್ತಮವಾಗಿ ಕೆಲಸ ಮಾಡುತ್ತವೆ ಅನ್ನೋದರ ಆಧಾರದಲ್ಲಿ ಮುಂದಿನ ತಿಂಗಳ ಯೋಜನೆ ಹಾಕಿಕೊಳ್ಳಿ.ನೆನಪಿಡಿ 30 ದಿನಗಳಲ್ಲಿ ಸಾವಿರಾರು ಓದುಗರು ಬರುತ್ತಾರೆ ಎನ್ನುವ ಖಾತರಿ ಇಲ್ಲ. ಆದರೆ ಈ ರೀತಿ ಸರಿಯಾದ ದಾರಿಯಲ್ಲಿ ನಿರಂತರವಾಗಿ ಕೆಲಸ ಮಾಡಿದರೆ ನಿಮ್ಮ ವೆಬ್ಸೈಟ್ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸುಧಾರಿಸಲು ಸಹಾಯವಾಗುತ್ತದೆ.
ಕೊನೆಯ ಮಾತು
ಸ್ನೇಹಿತರೆ.ವೆಬ್ ಸೈಟ್ ಶುರು ಮಾಡುವುದು ಸುಲಭ. ಆದರೆ ಅದಕ್ಕೆ ಓದುಗರನ್ನು ತರುವುದು ಸ್ವಲ್ಪ ಕಷ್ಟದ ಕೆಲಸ. ಅದಕ್ಕಾಗಿ ತಾಳ್ಮೆ, ಪರಿಶ್ರಮ ಮತ್ತು ಸರಿಯಾದ ಮಾಹಿತಿ ಬಹಳ ಮುಖ್ಯ.ನೀವು ಹೊಸದಾಗಿ ವೆಬ್ ಸೈಟ್ ನಡೆಸುತ್ತಿದ್ದರೆ ಆರಂಭದಲ್ಲಿ ಹೆಚ್ಚಿನ ಟ್ರಾಫಿಕ್ ಬರಲ್ಲ.ಅಂತಹ ಬೇಸರ ಮಾಡಿಕೊಳ್ಳಬೇಡಿ. ಪ್ರತಿದಿನ ಕಲಿಯುತ್ತ ಹಳೆಯ ತಪ್ಪುಗಳನ್ನು ಸರಿಪಡಿಸುತ್ತ ಮತ್ತು ಜನರಿಗೆ ಉಪಯುಕ್ತವಾದ ಲೇಖನಗಳನ್ನು ಪ್ರಕಟಿಸುತ್ತಾ ಮುಂದುವರಿಯಿರಿ.ನಿಮ್ಮ ಗುರಿ ಕೇವಲ ಹೆಚ್ಚು ಜನರು ವೆಬ್ಸೈಟ್ಗೆ ಬರುವುದಷ್ಟೇ ಆಗಿರಬಾರದು. ಬಂದ ಓದುಗರಿಗೆ ಒಳ್ಳೆಯ ಮಾಹಿತಿ ಸಿಗಬೇಕು. ಆಗ ನಿಮ್ಮ ವೆಬ್ಸೈಟ್ ಮೇಲೆ ವಿಶ್ವಾಸ ಬಳಸಿಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ವೆಬ್ಸೈಟ್ಗೆ ಟ್ರಾಫಿಕ್ ಹೆಚ್ಚಿಸಲು ನೀವು ಯಾವ ವಿಧಾನ ಬಳಸುತ್ತೀರಿ? ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

