
ಕರ್ನಾಟಕದಲ್ಲಿ.ಟೊಮೆಟೊ ಬೆಳೆದ ರೈತರಿಗೆ ಇದೀಗ ಬೆಲೆ ಕುಸಿತ ದೊಡ್ಡ ಆತಂಕ ತಂದಿದೆ.ಉತ್ತಮ ಗುಣಮಟ್ಟದ ಟೊಮೊಟೊ ಬೆಳೆದಿದ್ದರೂ.ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ.ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಾರುಕಟ್ಟೆಯಲ್ಲಿ.25 ಕೆಜಿ ಟೊಮೆಟೊ ಬಾಕ್ಸ್ ಕೇವಲ 100 ಎಂಬತ್ತರಿಂದ ಇನ್ನೂರರಷ್ಟು ಬೆಲೆಗೆ ಮಾರಾಟವಾಗುತ್ತಿರುವ ವರದಿ ರೈತರ ಸಂಕಷ್ಟವನ್ನು ತೋರಿಸಿದೆ.
ಟೊಮೆಟೊ ಬೆಲೆ ಏಕೆ ಕುಸಿಯುತ್ತದೆ?
ಮಾರುಕಟ್ಟೆಗೆ ಟೊಮೆಟೊ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.ಬೇಡಿಕೆಗಿಂತ ಪೂರೈಕೆ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ.ಜೊತೆಗೆ ಟೊಮೆಟೊ ಸಂಸ್ಕರಣಾ ಘಟಕಗಳ ಕೊರತೆಯು ರೈತರಿಗೆ ಸಮಸ್ಯೆಯಾಗುತ್ತಿದೆ.ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾದ ಟೊಮೊಟೊವನ್ನು ಸಂಗ್ರಹಿಸಲು.ಅಥವಾ ಸಂಸ್ಕರಿಸಲು ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ರೈತರು ತಕ್ಷಣ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ.
ರೈತರಿಗೆ ಎಷ್ಟು ನಷ್ಟ?
ಒಂದು 25 ಕೆಜಿ. ಬಾಕ್ಸ್ ಗೆ.100 ಎಂಬತ್ತರಿಂದ ₹200 ಮಾತ್ರ.ಕೆಜಿಗೆ ಸುಮಾರು.7.20ರಿಂದ8 ರಷ್ಟು ಬರುತ್ತದೆ.
ಇದರಲ್ಲಿ.ಕಟಾವು. ಪ್ಯಾಕಿಂಗ್.ಸಾಗಾಣಿಕೆ.ಮತ್ತು ಮಾರುಕಟ್ಟೆಯ ಖರ್ಚು ವೆಚ್ಚಗಳನ್ನು ಕಡಿತ ಮಾಡಿದ ನಂತರ.ರೈತರ ಕೈಗೆ ಉಳಿಯುವ ಹಣ.ಇನ್ನಷ್ಟು ಕಡಿಮೆಯಾಗಬಹುದು.
ಇದರಿಂದ ಉತ್ತಮ ಗುಣಮಟ್ಟದ ಟೊಮೊಟೊ ಬೆಳೆದ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ.ನಿರ್ಮಾಣವಾಗುತ್ತದೆ.
ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುತ್ತದೆಯೇ?
ಟೊಮೆಟೊ ಬೆಲೆ ಮುಂದಿನ ದಿನಗಳಲ್ಲಿ.ಹೇಗೆ ಬದಲಾಗುತ್ತದೆ ಎನ್ನುವುದು ಮಾರುಕಟ್ಟೆಗೆ ಬರುವ ಟೊಮೆಟೊ ಪ್ರಮಾಣ.ಬೇಡಿಕೆ, ಹವಾಮಾನ ಮತ್ತು ಇತರ ರಾಜ್ಯಗಳ ಪೂರೈಕೆಯ ಮೇಲೆ.ಅವಲಂಬಿತವಾಗಿರುತ್ತದೆ.ಆದ್ದರಿಂದ ರೈತರು ಪ್ರತಿದಿನ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯ ದರ ಪರಿಶೀಲಿಸಿ.ಸಾಧ್ಯವಾದರೆ ವಿವಿಧ ಮಾರುಕಟ್ಟೆಗಳ ದರಗಳನ್ನು ಹೋಲಿಸಿ ಮಾರಾಟ ಮಾಡುವುದರಿಂದ.ಉತ್ತಮ ಬೆಲೆ ಪಡೆಯುವ ಅವಕಾಶ ಹೆಚ್ಚಿರಬಹುದು.
ರೈತರು ಏನು ಮಾಡಬೇಕು?
*ಸ್ಥಳೀಯ ಎಪಿಎಂಸಿ ದರವನ್ನು ಪ್ರತಿದಿನ.ಪರಿಶೀಲಿಸಿ ನೋಡಬೇಕು.
* ಬೇರೆ ಹತ್ತಿರದ ಮಾರುಕಟ್ಟೆಗಳ ದರವನ್ನು ಹೋಲಿಸಿ.ಪರಿಶೀಲಿಸಬೇಕು.
*ಗುಣಮಟ್ಟದ ಟೊಮೆಟೊವನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಪ್ರಯತ್ನಿಸಬೇಕು.
*ಸಾಧ್ಯವಾದರೆ ರೈತರ ಉತ್ಪಾದಕರ ಸಂಘಗಳ ಮೂಲಕ ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆಯಬೇಕು.
*ಸರ್ಕಾರದ.ಮಾರುಕಟ್ಟೆ ಮತ್ತು ಕೃಷಿ ಇಲಾಖೆಯ ಅಧಿಕೃತ ಮಾಹಿತಿಯನ್ನು ಪ್ರತಿದಿನ ಪರಿಶೀಲಿಸಬೇಕು.
ಕರ್ನಾಟಕದ ಟೊಮೊಟೊ ರೈತರಿಗೆ ದೊಡ್ಡ ಸವಾಲು
ಟೊಮೆಟೊ ಬೆಲೆಗಳಲ್ಲಿ ಇಂತಹ ಏರಿಳಿತ ಸಾಮಾನ್ಯವಾಗಿದ್ದರೂ.ಉತ್ಪಾದನಾ ವೆಚ್ಚ ಹೆಚ್ಚಿರುವ ಸಂದರ್ಭಗಳಲ್ಲಿ ಕಡಿಮೆ ಬೆಲೆ ರೈತರಿಗೆ ದೊಡ್ಡ ಆರ್ಥಿಕ ಹೊರೆಯಾಗುತ್ತದೆ.ಆದ್ದರಿಂದ ಸಂಗ್ರಹಣೆ.ಸಂಸ್ಕರಣೆ.ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆ ರೈತರಿಗೆ ಬಹಳ ಮುಖ್ಯವಾಗಿರುತ್ತದೆ.
ಗಮನಿಸಿ:ಟೊಮೊಟೊ ದರ ಮಾರುಕಟ್ಟೆ ಮತ್ತು ದಿನದ ಅನುಗುಣವಾಗಿ ಬದಲಾಗುತ್ತದೆ. ಆದ್ದರಿಂದ ಈ ಲೇಖನದಲ್ಲಿರುವ ದರವನ್ನು ಶಾಶ್ವತ ದರ ಎಂದು ಪರಿಗಣಿಸಬಾರದು.