ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲು.ಮೋಡ ಮತ್ತು ಅಲ್ಲಲ್ಲಿ ಮಳೆಯ ವಾತಾವರಣ ಕಂಡು ಬರುತ್ತಿದೆ.ಮಳೆ ಯಾವಾಗ ಬರುತ್ತದೆ ಎಂದು ರೈತರು ಆಕಾಶದ ಕಡೆ ನೋಡುತ್ತಾ.ಕಾದು ಕುಳಿತಿದ್ದಾರೆ.ವಿಶೇಷವಾಗಿ ಕೃಷಿ ಪ್ರದೇಶಗಳಲ್ಲಿ ಮಳೆಯ ಆಗಮನ ರೈತರ ಪಾಲಿಗೆ ಬಹಳ ಮುಖ್ಯವಾಗಿರುತ್ತದೆ.ಒಂದು ಕಡೆ ಬೆಳೆಗಳಿಗೆ ನೀರು ಬೇಕು. ಮತ್ತೊಂದು ಕಡೆ ಮಳೆ ಜಾಸ್ತಿಯಾದರೆ ಬೆಳೆ ಹಾಳಾಗುವ ಭಯವೂ ಇರುತ್ತದೆ.
ಈಗ ಸೆಪ್ಟೆಂಬರ್ ತಿಂಗಳು ಆಗಿರುವುದರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಕಾಣಿಸುತ್ತಿದೆ.ಕೆಲವು ಕಡೆ ಮೋಡ ಕವಿದು ಮಳೆ ಬರುತ್ತಿದ್ದರೆ ಇನ್ನು ಕೆಲವು ಕಡೆ ಮೋಡ ಇದ್ದರೂ ಮಳೆ ಬೀಳದೆ ಹೋಗುತ್ತಿದೆ.ಹೀಗಾಗಿ ರೈತರು ತಮ್ಮ ಊರಿನ ಸ್ಥಳೀಯ ಹವಾಮಾನ ಮುನ್ಸೂಚನೆಯನ್ನು ಗಮನಿಸುವುದು ಮುಖ್ಯ.
ಮುಂದಿನ ದಿನಗಳಲ್ಲಿ ಮಳೆಯ ಸಾಧ್ಯತೆ ಹೇಗಿರುತ್ತದೆ?
ಹವಾಮಾನ ಮುನ್ಸೂಚನೆಯ ಪ್ರಕಾರ.ಭಾಗದ ಕೆಲವು ಭಾಗಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.ಆದರೆ ಎಲ್ಲ ಜಿಲ್ಲೆಗಳಲ್ಲೂ ಒಂದೇ ರೀತಿಯಲ್ಲಿ ಮಳೆಯಾಗುವುದಿಲ್ಲ.ಒಂದು ಊರಿನಲ್ಲಿ ಮಳೆ ಬಂದರೂ ಪಕ್ಕದ ಊರಿನಲ್ಲಿ ಮಳೆ ಇಲ್ಲದಿರುವ ಸಾಧ್ಯತೆಯೂ ಇರುತ್ತದೆ.
ಚಳಕೆರೆ ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಒಣ ಪ್ರದೇಶಗಳಲ್ಲಿ ರೈತರು ಮಳೆಯನ್ನೇ ಬಹಳ ನಿರೀಕ್ಷೆಯಿಂದ ನೋಡುತ್ತಾರೆ.ಮೋಡ ಕವಿದಾಗ ಮಳೆ ಬರುತ್ತದೆ ಎಂದುಕೊಂಡು ಹೊಲದ ಕೆಲಸಗಳನ್ನು ಯೋಜನೆ ಮಾಡುತ್ತಾರೆ.ಆದರೆ ಕೊನೆ ಕ್ಷಣದಲ್ಲಿ ಮೋಡ ಚದುರಿದರೆ ರೈತರಿಗೆ ನಿರಾಶೆಯಾಗುತ್ತದೆ.
ಮಳೆ ಯಾಕೆ ಮುಖ್ಯ?
ಮಳೆ ರೈತನ ಕೃಷಿಗೆ ಜೀವ ತಂದಂತೆ.ಬಿತ್ತನೆ ಮಾಡಿದ ಬೆಲೆ ಸರಿಯಾಗಿ ಬೆಳೆಯಲು ಮಣ್ಣಿನಲ್ಲಿ ತೇವಾಂಶ ಇರಬೇಕು.
ಮಳೆ ಬಂದರೆ.ಹೊಲದಲ್ಲಿ ಮಣ್ಣಿಗೆ ತೇವ ಸಿಗುತ್ತದೆ.ಕೆರೆ, ಹಳ್ಳ, ಬಾವಿ ಮತ್ತು ಇತರ ನೀರಿನ ಮೂಲಗಳಿಗೂ ನೀರು ಸೇರುತ್ತದೆ.
ಟೊಮೆಟೊ.ಈರುಳ್ಳಿ ಮೆಕ್ಕೆಜೋಳ, ರಾಗಿ, ಶೇಂಗಾ.ಸೇರಿದಂತೆ ಹಲವು ಬೆಲೆಗಳಿಗೆ ಸರಿಯಾದ ಸಮಯದಲ್ಲಿ ನೀರು ಸಿಗುವುದು ಮುಖ್ಯ.ಮಳೆ ಸಮಯಕ್ಕೆ ಬಂದರೆ ರೈತರ ಖರ್ಚು ಸ್ವಲ್ಪ ಕಡಿಮೆಯಾಗಬಹುದು. ಆದರೆ ಮಳೆ ಕೈ ಕೊಟ್ಟರೆ ನೀರಿಗಾಗಿ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ.
ಮಳೆ ಜಾಸ್ತಿಯಾದರೂ ಸಮಸ್ಯೆ ಇದೆ.
ಮಳೆ ಬೇಕು ಅಂತ ರೈತರು ಕಾಯುತ್ತಾರೆ. ಆದರೆ.ಮಳೆ ಅತಿಯಾಗಿ ಬಂದರೆ ಅದರಿಂದಲೂ ತೊಂದರೆ ಆಗಬಹುದು.ಹೊಲದಲ್ಲಿ ನೀರು ನಿಂತರೆ ಕೆಲವು ಬೆಳೆಗಳ ಬೇರುಗಳಿಗೆ ಹಾನಿಯಾಗಬಹುದು.ಟೊಮೆಟೊ ಮತ್ತು ತರಕಾರಿ ಬೆಳೆಗಳಲ್ಲಿ.ತೇವಾಂಶ ಹೆಚ್ಚಾದರೆ?ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಹೀಗಾಗಿ ಮಳೆ ಬಂದಾಗ.ರೈತರು ಹೊಲದಲ್ಲಿ ನೀರು ನಿಲ್ಲದಂತೆ ಕಾಲುವೆ ಅಥವಾ ನೀರು ಹೊರಹೋಗುವ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು.ವಿಶೇಷವಾಗಿ ಈಗಾಗಲೇ ರೋಗ ಇರುವ ಬೆಳೆಗಳಲ್ಲಿ ಹೆಚ್ಚಿನ ಮಳೆಯ ನಂತರ ಎಚ್ಚರಿಕೆ ವಹಿಸಬೇಕಾಗುತ್ತದೆ.
ಹಳ್ಳಿಗಳಲ್ಲಿ ಮಳೆ ಬಂದಾಗ ಆಗುವ ಬದಲಾವಣೆ.
ಹಳ್ಳಿಗಳಲ್ಲಿ ಮಳೆ ಬಂದರೆ ವಾತಾವರಣವೇ ಬದಲಾಗುತ್ತದೆ. ಒಣಗಿದ್ದ ಮಣ್ಣು.ತಂಪಾಗುತ್ತದೆ.ರಸ್ತೆಯ ಮೇಲೆ ಮಣ್ಣಿನ ವಾಸನೆ ಬರುತ್ತದೆ.ಜಾನುವಾರುಗಳಿಗೆ ನೀರು ಸಿಗುತ್ತದೆ.ಕೆರೆಕಟ್ಟೆಗಳಲ್ಲಿ ನೀರು ಸೇರುವ ನಿರೀಕ್ಷೆ ಮೂಡುತ್ತದೆ.ರೈತರು ಮಳೆ ಬಂದ ಕೂಡಲೇ ಹೊಲದ ಕಡೆ ಹೋಗಿ ಬೆಳೆ ಹೇಗಿದೆ ಎಂದು ನೋಡುತ್ತಾರೆ.ಇನ್ನೂ ಎರಡು ಮಳೆ ಬಂದರೆ ಬೆಳೆ ಚೆನ್ನಾಗಿ ನಿಲ್ಲುತ್ತದೆ ಎಂದು ಮಾತನಾಡಿಕೊಳ್ಳುತ್ತಾರೆ.ಕೃಷಿ ಮಾಡುವವರಿಗೆ ಈ ಮಳೆಯ ಪ್ರತಿಯೊಂದು ಹನಿಯು ಮುಖ್ಯ.
ಮಳೆ ಬರದಿದ್ದರೆ ರೈತರ ಪರಿಸ್ಥಿತಿ.
ಮಳೆ ತಡವಾದರೆ ರೈತರ ಕೆಲಸವು ತಡವಾಗುತ್ತದೆ.ಬಿತ್ತನೆ ಮಾಡಿರುವ ಬೆಳೆಗಳಿಗೆ ಸರಿಯಾದ ಸಮಯದಲ್ಲಿ ನೀರು ಸಿಗದಿದ್ದರೆ ಬೆಳೆಗಳಿಗೆ ಕುಂಠಿತವಾಗಬಹುದು.ನೀರಾವರಿ ವ್ಯವಸ್ಥೆ ಇರುವ ರೈತರು ಪಂಪ್ ಸೆಟ್ ಮೂಲಕ ನೀರು ಕೊಡಬಹುದು.ಆದರೆ ರೈತರಿಗೆ ಆ ಸೌಲಭ್ಯ ಇರುವುದಿಲ್ಲ.ಮಳೆ ಆಧಾರಿತ ಕೃಷಿ ಮಾಡುವ ರೈತರಿಗೆ.ಮೋಡ ಬಂದಾಗ ಒಂದು ರೀತಿಯ ಭರವಸೆ ಇರುತ್ತದೆ. ಆದರೆ ಮಳೆ ಬೀಳದೆ ಹೋದರೆ ಮತ್ತೆ ಮುಂದಿನ ಮಳೆಯ ನಿರೀಕ್ಷೆ ಶುರುವಾಗುತ್ತದೆ. ಇದೇ ಕಾರಣಕ್ಕೆ ಹಳ್ಳಿಯ ಜನರಿಗೆ ಮಳೆಯ ಬಗ್ಗೆ ಯಾವಾಗಲೂ ಕುತೂಹಲ ಇರುತ್ತದೆ.
ರೈತರು ಈಗ ಏನು ಮಾಡಬೇಕು?
ಮಳೆ ಮುನ್ಸೂಚನೆಯಿರುವ ಸಮಯದಲ್ಲಿ.ಕಾಲದಲ್ಲಿ.ನಿಲ್ಲದಂತೆ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು.ಈಗಾಗಲೇ ಬೆಳೆಗಳಿಗೆ ಔಷಧಿ ಸಿಂಪಡಿಸಿದರೆ ಮಳೆಯ ನಂತರ ಮತ್ತೆ ಔಷಧಿ ಬೇಕೇ ಬೇಡವೇ ಎಂಬುದನ್ನು ಕೃಷಿ ಅಧಿಕಾರಿಗಳ ಸಲಹೆಯೊಂದಿಗೆ ನಿರ್ಧರಿಸಬೇಕು.
ಮಾರುಕಟ್ಟೆಗೆ ಬೆಳೆ ತೆಗೆದುಕೊಂಡು ಹೋಗುವ ರೈತರು.ಕೂಡ ಮಳೆಯ ಮುನ್ಸೂಚನೆ ಗಮನಿಸಬೇಕು.ಟೊಮೆಟೊ ಮತ್ತು ಇತರ ತರಕಾರಿಗಳನ್ನು ಕೊಯ್ಲು ಮಾಡುವ ಸಮಯದಲ್ಲಿ ಮಳೆ ಬಂದರೆ ಗುಣಮಟ್ಟಕ್ಕೆ ಪರಿಣಾಮ ಆಗಬಹುದು. ಆದ್ದರಿಂದ.ನಿಗ ವಹಿಸಬೇಕು.
ಕೊನೆಯ ಮಾತು
ಮಳೆ ಯಾವಾಗ ಬರುತ್ತದೆ ಎನ್ನುವುದು ರೈತನ ಕೈಯಲ್ಲಿಲ್ಲ. ಆದರೆ ಮಳೆ ಬಂದಾಗ.ಅದರ ನೀರನ್ನು ಸರಿಯಾಗಿ ಬಳಸಿಕೊಳ್ಳುವುದು ಮತ್ತು ಮಳೆ ಜಾಸ್ತಿಯಾದಾಗ ಬೆಳೆ ರಕ್ಷಿಸುವುದು ರೈತನ ಕೈಯಲ್ಲಿದೆ.ಕರ್ನಾಟಕದ ಹಲವು ಹಳ್ಳಿಗಳಲ್ಲಿ ರೈತರು ಈಗಲೂ ಆಕಾಶದ ಕಡೆ ನೋಡುತ್ತಾ ಕುಳಿತಿದ್ದಾರೆ.ಒಳ್ಳೆಯ ಮಳೆಯ ನಿರೀಕ್ಷೆಯಲ್ಲಿದ್ದಾರೆ.ಮಳೆ ಸರಿಯಾದ ಸಮಯಕ್ಕೆ ಬಂದು ಬೆಳೆ ಚೆನ್ನಾಗಿ ಬೆಳೆದರೆ ರೈತನ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
ನಿಮ್ಮ ಊರಿನಲ್ಲಿ ಈಗ ಮಳೆಯ ಪರಿಸ್ಥಿತಿ ಹೇಗಿದೆ?ಮಳೆ ಬಂದಿದೆಯಾ ಅಥವಾ ಇನ್ನೂ ಮೋಡ ಮಾತ್ರ ಇದೆಯಾ?ನಿಮ್ಮ ಊರಿನ ಮಳೆಯ ಮಾಹಿತಿ ಕೆಳಗೆ ಕಾಮೆಂಟ್ ಮಾಡಿ.
ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.https://nammasuddivartha.com/karnataka-tomoto-rate/

