ಶಾಲಾ ಮಕ್ಕಳಿಗೆ ಸರ್ಕಾರದ ಹೊಸನಿಯಮಗಳು.

ಬೆಂಗಳೂರು: ಇಂದಿನ ಕಾಲದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ ವಿಶೇಷವಾಗಿ ಕೃತಕ ಬುದ್ಧಿಮತ್ತೆ ಅಥವಾ Artificial intelligence(AI) ಎಂಬ ತಂತ್ರಜ್ಞಾನ ಶಿಕ್ಷಣ ಉದ್ಯೋಗ ಕೃಷಿ ವ್ಯಾಪಾರ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಪ್ರಮುಖ ಪಾತ್ರ ವಹಿಸುತ್ತಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಶಾಲಾ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ AI ಬಗ್ಗೆ ಪರಿಚಯ ಮಾಡಿಕೊಳ್ಳುವ ಬಗ್ಗೆ ಸ್ವಲ್ಪ ರಚನೆ ನಡೆಸುತ್ತಿದೆ ಶಾಲಾ ಮಕ್ಕಳಿಗೆ.

 ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಕೆಲವು  ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು ಇದನ್ನು ಇನ್ನಷ್ಟು ಕೆಳಗಿನ ತರಗತಿಗಳಿಗೆ ವಿಸ್ತರಿಸುವ ಕುರಿತು ಚರ್ಚೆ ನಡೆಯುತ್ತಿದೆ 6ನೇ ತರಗತಿಯಿಂದಲೇ ಶಿಕ್ಷಣ ಪರಿಚಯಿಸುವ ಸಾಧ್ಯತೆ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಗಮನಸೆಳೆದಿದೆ .

6ನೇ ತರಗತಿಯಿಂದ AI ಕಲಿಕೆ 

ಇದುವರೆಗೆ AI ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಪ್ರೌಢಶಾಲಾ ಹಂತದಲ್ಲಿ ಸಿಗುತ್ತಿತ್ತು ಆದರೆ ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದಲೇ ಡಿಜಿಟಲ್ ಜ್ಞಾನ ನೀಡಬೇಕು ಎಂಬ ಅಭಿಪ್ರಾಯ ಹೆಚ್ಚಾಗಿದೆ ಶಾಲಾ ಮಕ್ಕಳಿಗೆ.

ಈ ಹಿನ್ನೆಲೆಯಲ್ಲಿ ಒಂಬತ್ತನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ  ತರಬೇತಿಯನ್ನು 6ನೇ ತರಗತಿಯಿಂದಲೇ ಆರಂಭಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ ಇದರ ಉದ್ದೇಶ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ AI ಎಂದರೇನು ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಅದನ್ನು ಶಿಕ್ಷಣದಲ್ಲಿ ಹೇಗೆ ಬಳಸಬಹುದು ಎಂಬ ಮೂಲಭೂತ ಜ್ಞಾನ ನೀಡುವುದಾಗಿದೆ ಶಾಲಾ ಮಕ್ಕಳಿಗೆ.

ಮಕ್ಕಳಿಗೆ AI ಕಲಿಸುವುದರಿಂದ ಏನು ಪ್ರಯೋಜನ?

AIಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಹಲವು ರೀತಿಯ ಪ್ರಯೋಜನವಾಗಬಹುದು.

 ಹಿಂದಿನ ಜಗತ್ತಿನಲ್ಲಿ ಕಂಪ್ಯೂಟರ್ ಮತ್ತು ಡಿಜಿಟಲ್ ತಂತ್ರಜ್ಞಾನದ ಜ್ಞಾನ ಬಹಳ ಮುಖ್ಯವಾಗಿದೆ Ai ಬಗ್ಗೆ ಮೂಲಭೂತ ಜ್ಞಾನ ಪಡೆದ ಮಕ್ಕಳು ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಅವಕಾಶಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗಬಹುದು ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮತ್ತು ತಾಂತ್ರಿಕ ಚಿಂತನೆ ಬೆಳೆಸಲು ಸಹ ಇದು ಸಹಕಾರಿಯಾಗಬಹುದು ಆದರೆ AI ಶಿಕ್ಷಣ ಎಂದರೆ ಕೇವಲ ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವುದಲ್ಲ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸುವುದು ಮಾಹಿತಿಯನ್ನು ಪರಿಶೀಲಿಸುವುದು ಮತ್ತು ಡಿಜಿಟಲ್ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳೋದು ಇದರ ಭಾಗವಾಗಿರಬೇಕು.

 ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಹೊತ್ತು

 ಖಾಸಗಿ ಶಾಲೆಗಳಲ್ಲಿ ಈಗಾಗಲೇ ಕಂಪ್ಯೂಟರ್ ಸ್ಮಾರ್ಟ್ ಕ್ಲಾಸ್ ಮತ್ತು ವಿವಿಧ ಡಿಜಿಟಲ್ ಕಲಿಕಾ ವಿಧಾನಗಳನ್ನು ಬಳಸಲಾಗುತ್ತದೆ ಇದೇ ರೀತಿ ಸರ್ಕಾರಿ ಶಾಲೆಗಳಲ್ಲಿಯೂ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಹೆಚ್ಚಿಸುವ ಪ್ರಯತ್ನಗಳನ್ನು ನಡೆಯುತ್ತಿವೆ ಸರ್ಕಾರಿ ಶಾಲೆಯ ಮಕ್ಕಳಿಗೂ ಉತ್ತಮ ತಾಂತ್ರಿಕ ಶಿಕ್ಷಣ ಸಿಗಬೇಕು ಎಂಬುವುದು ಇದರ ಮುಖ್ಯ ಉದ್ದೇಶವಾಗಿದೆ ಗ್ರಾಮೀಣ ಪ್ರದೇಶದ ಮಕ್ಕಳಿಗೂ AI ಮತ್ತು ಡಿಜಿಟಲ್ ತಂತ್ರಜ್ಞಾನದ ಪರಿಚಯ ಸಿಕ್ಕರೆ ಭವಿಷ್ಯದಲ್ಲಿ ಅವರು ಹೊಸ ರೀತಿಯ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಹುಡುಕಲು ಅನುಕೂಲವಾಗಬಹುದು.

AI ಶಿಕ್ಷಣ ಹೇಗಿರಬಹುದು ?

6ನೇ ತರಗತಿಯಿಂದ AI ಪರಿಚಯಿಸಿದರೆ ಮಕ್ಕಳ ವಯಸ್ಸಿಗೆ ತಕ್ಕಂತೆ ಸರಳ ವಿಷಯಗಳನ್ನು ಕಲಿಸುವ ಸಾಧ್ಯತೆ ಇದೆ ಉದಾಹರಣೆಗೆ AI ಎಂದರೇನು ನಮ್ಮ ದಿನನಿತ್ಯದ ಜೀವನದಲ್ಲಿ AI ಎಲ್ಲಿ ಬಳಸಲಾಗುತ್ತದೆ   ಧ್ವನಿ ಗುರುತಿಸುವಿಕೆ ಹೇಗೆ ಕೆಲಸ ಮಾಡುತ್ತದೆ ಆನ್ಲೈನ್ನಲ್ಲಿ ನಮಗೆ ಬೇಕಾದ ಮಾಹಿತಿಯನ್ನು ತಂತ್ರಜ್ಞಾನ ಹೇಗೆ ತೋರಿಸುತ್ತದೆ ಎಂಬಂತಹ ಮೂಲಭೂತ ವಿಷಯಗಳನ್ನು ಮಕ್ಕಳಿಗೆ ಪರಿಚಯಿಸಬಹುದು.

ಮುಂದಿನ ತರಗತಿಗಳಲ್ಲಿ ಈ ಉಪಕರಣಗಳ ಬಳಕೆ ಡಿಜಿಟಲ್ ಸುರಕ್ಷತೆ ಮಾಹಿತಿಯ ಸತ್ಯ ಸತ್ಯತೆಯ ಪರಿಶೀಲನೆ ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯಂತಹ ವಿಷಯಗಳನ್ನು ಕಲಿಸುವ ಸಾಧ್ಯತೆ ಇದೆ.

ಗ್ರಾಮೀಣ ಮಕ್ಕಳಿಗೂ ಹೊಸ ಅವಕಾಶ.

ಕರ್ನಾಟಕದ ಗ್ರಾಮೀಣ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ಶಾಲೆಗಳಿವೆ.ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೂ ಹೊಸ ತಂತ್ರಜ್ಞಾನಗಳ ಪರಿಚಯ ಸಿಗುವುದು ಮುಖ್ಯವಾಗಿರುತ್ತದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು.ಮುಂದೆ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಸಾಫ್ಟ್ವೇರ್ ಮತ್ತು ಇತರ ತಂತ್ರಜ್ಞಾನಗಳಲ್ಲಿ.ದೊರೆಯಲು ಚಿಕ್ಕ ವಯಸ್ಸಿನಲ್ಲಿ ಡಿಜಿಟಲ್ ಜ್ಞಾನ ಸಹಾಯ ಮಾಡಬಹುದು.ಆದರೆ ಶಾಲೆಗಳಲ್ಲಿ ಕಂಪ್ಯೂಟರ್ ಸೌಲಭ್ಯ, ಇಂಟರ್ನೆಟ್ ಸಂಪರ್ಕ ಮತ್ತು ತರಬೇತಿ ಪಡೆದ ಶಿಕ್ಷಕರು ಇರುವುದು ಅಷ್ಟೇ ಮುಖ್ಯಶಾಲಾ ಮಕ್ಕಳಿಗೆ.

ಶಿಕ್ಷಕರ ಪಾತ್ರವೂ ಮುಖ್ಯ.

ವಿದ್ಯಾರ್ಥಿಗಳಿಗೆ AI ಕಲಿಸುವುದರ ಜೊತೆಗೆ ಶಿಕ್ಷಕರು ಸೂಕ್ತ ತರಬೇತಿ ನೀಡಬೇಕಾಗುತ್ತದೆ.AI ಉಪಕರಣಗಳನ್ನು ಹೇಗೆ ಬೆಳೆಸಬೇಕು? ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ವಿಷಯವನ್ನು ವಿವರಿಸಬೇಕು ಮತ್ತು AI ಮೂಲಕ ದೊರೆಯುವ ಮಾಹಿತಿಯನ್ನು ಹೀಗೆ ಪರಿಶೀಲಿಸಬೇಕು ಎಂಬುದನ್ನು ಶಿಕ್ಷಕರು ತಿಳಿದುಕೊಳ್ಳುವುದು ಅಗತ್ಯ.

AI ನೀಡುವ ಪ್ರತಿಯೊಂದು ಮಾಹಿತಿಯೂ ಶೇಕಡಾ ನೂರರಷ್ಟು ಸರಿಯಾಗಿರುತ್ತದೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಮಾಹಿತಿಯನ್ನು ಪರಿಶೀಲಿಸುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸುವುದು ಬಹಳ ಮುಖ್ಯ.

ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ.

AI ಮತ್ತು ಇಂಟರ್ನೆಟ್ ಬಳಸುವಾಗ ಮಕ್ಕಳ ಆನ್ ಲೈನ್ ಸುರಕ್ಷತೆಯು ಪ್ರಮುಖ ವಿಷಯವಾಗಿರುತ್ತದೆ. ವೈಯಕ್ತಿಕ ಮಾಹಿತಿ.ಓ ಟಿ ಪಿ ಫೋಟೋ.ಅಥವಾ ಇತರ ಖಾಸಗಿ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು.ಅರಿವನ್ನು ಮಕ್ಕಳಿಗೂ ನೀಡಬೇಕು.ಅದೇ ರೀತಿ ಎಐ ಬಳಸಿ ತಯಾರಿಸಲಾದ ಸುಳ್ಳು ಚಿತ್ರಗಳು, ವಿಡಿಯೋಗಳು ಮತ್ತು ತಪ್ಪು ಮಾಹಿತಿಯನ್ನು ಗುರುತಿಸುವ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಮುಂದಿನ ದಿನಗಳಲ್ಲಿ ಬಹಳ ಮುಖ್ಯವಾಗಲಿದೆ.

ಮಕ್ಕಳು ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಏನು ಕಲಿಯುತ್ತಿದ್ದಾರೆ? ಯಾವ ವೆಬ್ ಸೈಟ್ ಅನ್ನು ಬಳಸುತ್ತಿದ್ದಾರೆ ಮತ್ತು AI ಉಪಕರಣಗಳನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ?ಎಂಬುದರ ಬಗ್ಗೆ ಪೋಷಕರು ಗಮನ ಹರಿಸಬೇಕು.

ಭವಿಷ್ಯದ ಉದ್ಯೋಗಿಗಳಿಗೆ ಸಹಾಯ

AI ತಂತ್ರಜ್ಞಾನ ಮುಂದಿನ ವರ್ಷಗಳಲ್ಲಿ ಚಿತ್ರಗಳಿಗೆ ಪ್ರವೇಶಿಸುವ ಸಾಧ್ಯತೆ ಇದೆ.ಆದ್ದರಿಂದ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದಲೇ ತಂತ್ರಜ್ಞಾನದ ಪರಿಚಯ ನೀಡುವುದು ಅವರ ಭವಿಷ್ಯದ ಶಿಕ್ಷಣಕ್ಕೆ ಸಹಾಯವಾಗಬಹುದು.ಆದರೆ ಪ್ರತಿಯೊಂದು ವಿದ್ಯಾರ್ಥಿಯೂ AI ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂಬುದು ಇದರ ಉದ್ದೇಶವಲ್ಲ.ತಂತ್ರಜ್ಞಾನವನ್ನು ಅರ್ಥಮಾಡಿಕೊಂಡು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ ಬೆಳೆಸುವುದು ಮುಖ್ಯ.https://karnataka.gov.in

ಕೊನೆಯ ಮಾತು.

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದಲೇ AI ಶಿಕ್ಷಣ ಪರಿಶೀಲಿಸುವ ಬಗ್ಗೆ ನಡೆಸುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿದೆ. ತಂತ್ರಜ್ಞಾನಗಳ ಬಳಕೆ ಸರಿಯಾಗಿ ಅರಿವು ನೀಡುವುದು ಮಹತ್ವದ್ದಾಗಿದೆ.ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ಸರಿಯಾದ ಅರಿವು ನೀಡುವುದು ಮಹತ್ವದಾಗಿದೆ.AI ಶಿಕ್ಷಣದ ಜೊತೆಗೆ ಡಿಜಿಟಲ್ ಸುರಕ್ಷತೆ, ಮಾಹಿತಿ ಸತ್ಯಸತ್ಯತೆಯ ಪರಿಶೀಲನೆ ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಬಗ್ಗೆಯೂ ಮಕ್ಕಳಿಗೆ ತಿಳಿಸಬೇಕು.

ಅಂತಿಮ ನಿರ್ಧಾರ, ಮತ್ತು.ಅಧಿಕೃತ ಮಾರ್ಗಸೂಚಿಗಳು ಹೊರಬಂದ ನಂತರ ಆರನೇ ತರಗತಿಯಿಂದ AI ಶಿಕ್ಷಣ ಯಾವ ರೀತಿಯಲ್ಲಿ ಜಾರಿಗೆ ಬರಲಿದೆ ಎಂಬುದು ಇನ್ನಷ್ಟು ಸ್ಪಷ್ಟವಾಗಲಿದೆ. 

ಇಂತಹ ಕರ್ನಾಟಕದ ಸರ್ಕಾರಿ ಯೋಜನೆಗಳು.ಶಿಕ್ಷಣ ಕ್ಷೇತ್ರದ ಹೊಸ ಬೆಳವಣಿಗೆಗಳು, ಉದ್ಯೋಗ ಮಾಹಿತಿ ಮತ್ತು ಜನರಿಗೆ ಉಪಯೋಗವಾಗುವ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ.ನಮ್ಮ ಸುದ್ದಿ ವಾರ್ತಾ ಬ್ಲಾಗ್ ಅನ್ನು ನಿರಂತರವಾಗಿ ಭೇಟಿ ಮಾಡುತ್ತಿರಿ.ಧನ್ಯವಾದಗಳು.