ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಂದ ಹಿಡಿದು ದೊಡ್ಡ ವಯಸ್ಸಿನವರಿಗೆ ಅನೇಕರು ಕೂದಲು ಉದುರುವುದು ಸಮಸ್ಯೆಯಿಂದ ಬಳಲುತ್ತಿದ್ದಾರೆ.ತಲೆ ಸ್ನಾನ ಮಾಡುವಾಗ ಬಾಚಣಿಗೆ ಹಾಕುವಾಗ ಅಥವಾ ಮಳೆ ದಿಂಬಿನ ಮೇಲೆ ಕೂದಲು ಕಾಣಿಸಿಕೊಂಡಾಗ ಹಲವರಿಗೆ ಆತಂಕವಾಗುತ್ತದೆ.ಹಾಗಾದರೆ ಕೂದಲು ಉದುರುವುದಕ್ಕೆ ಕಾರಣಗಳೇನು? ಕೂದಲು ಉದುರುವುದಕ್ಕೆ ಕಡಿಮೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬೇಕು. ಈ ಲೇಖನದಲ್ಲಿ ಸರಳವಾಗಿ ತಿಳಿಯೋಣ ಬನ್ನಿ.
1.ಕೂದಲು ಉದುರುವುದಕ್ಕೆ ಪ್ರಮುಖ ಕಾರಣಗಳು.
.ಪೌಷ್ಟಿಕಾಂಶದ ಕೊರತೆ
ನಮ್ಮ ದೇಹಕ್ಕೆ ಸರಿಯಾದ ಪೌಷ್ಟಿಕಾಂಶ ಸಿಗದಿದ್ದರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆಹಾರದಲ್ಲಿ ಪ್ರೋಟೀನ್, ಕಬ್ಬಿಣಾಂಶ ಮತ್ತು ಇತರ ಅಗತ್ಯ ಪೋಷಕಾಂಶಗಳ ಕೊರತೆ ಇದ್ದರೆ ಕೂದಲು ಉದುರುವುದು ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.ಇದು ಕೂಡ ಕೂದಲು ಉದುರುವುದಕ್ಕೆ ಮುಖ್ಯ ಕಾರಣವಾಗಬಹುದು.
.ಮಾನಸಿಕ ಒತ್ತಡ
ಮಾನಸಿಕ ಒತ್ತಡವು ಕೂದಲು ಉದುರುವುದಕ್ಕೆ ಹೆಚ್ಚಿನ ಆಘಾತವನ್ನು ಉಂಟುಮಾಡುವ ಒಂದು ಪ್ರಮುಖ ಕಾರಣ.ಕೆಲಸ, ಕುಟುಂಬದ ಸಮಸ್ಯೆಗಳು.ನಿದ್ರೆ ಮಾಡದಿರುವುದು ದೇಹದ ಮೇಲೆ ಪರಿಣಾಮ ಬೀರುತ್ತವೆ. ತೀವ್ರವಾದ ಮಾನಸಿಕ ಅಥವಾ ದೈಹಿಕ ಒತ್ತಡದ ಕೆಲವು ತಿಂಗಳುಗಳ ನಂತರ ಕೂದಲು ಹೆಚ್ಚಾಗಿ ಉದುರಬಹುದು.ಆದ್ದರಿಂದ ನಾವು ಎಚ್ಚರಿಕೆಯಿಂದ ನಿಗಾ ವಹಿಸಬೇಕು.ಇದು ಕೂಡ ಕೂದಲು ಉದುರುವುದಕ್ಕೆ ಮುಖ್ಯ ಕಾರಣವಾಗಬಹುದು.
.ನಿದ್ರೆಯ ಕೊರತೆ
ಪ್ರತಿದಿನ ಸರಿಯಾಗಿ ನಿದ್ರೆ ಮಾಡದಿದ್ದರೆ?ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ.ವಯಸ್ಕರು ಸಾಮಾನ್ಯವಾಗಿ ದಿನಕ್ಕೆ ಏಳರಿಂದ ಒಂಬತ್ತು ಗಂಟೆಗಳ ನಿದ್ರೆಗೆ ಆದ್ಯತೆ ನೀಡಬೇಕು.
.ಹಾರ್ಮೋನ್ ಬದಲಾವಣೆ
ಥೈರಾಯ್ಡ್ ಸಮಸ್ಯೆಗಳು ತಮ್ಮ ಕೆಲವು ಹಾರ್ಮೋನ್ ಬದಲಾವಣೆಗಳಿಂದಲೂ ಕೂದಲು ಉದರಬಹುದು. ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆಯುವುದು ಮುಖ್ಯ.
. ವಂಶಪಾರಂಪರ್ಯ
ತಂದೆ, ತಾಯಿ ಅಥವಾ ಕುಟುಂಬದ ಇತರ ಸದಸ್ಯರಿಗೆ ಮೊದಲು ತೆಳುವಾಗುವ ಸಮಸ್ಯೆ ಇದ್ದರೆ ಕೆಲವರಲ್ಲಿ ವಂಶಪಾರಂಪರ್ಯವಾಗಿ ಕೂದಲು ಉದುರುವ ಸಾಧ್ಯತೆ ಹೆಚ್ಚಿರುತ್ತದೆ.
.ತಲೆಹೊಟ್ಟು ಮತ್ತು ನೆತ್ತಿಯ ಸಮಸ್ಯೆಗಳು
ತಲೆಹೊಟ್ಟು ನೆತ್ತಿಯ ಉರಿಯೂತ ಅಥವಾ ಕೆಲವು ಚರ್ಮದ ಕಾಯಿಲೆಗಳು ತುರಿಕೆಗೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು.ಮತ್ತು ತಲೆಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.ಇದು ಕೂಡ ಕೂದಲು ಉದುರುವುದಕ್ಕೆ ಮುಖ್ಯ ಕಾರಣವಾಗಬಹುದು.
.ಕೂದಲಿಗೆ ರಾಸಾಯನಿಕ ಸೋಪು ಮತ್ತು ಶಾಂಪುಗಳ ಬಳಕೆ
ಪದೇ ಪದೇ ಏರ್ ಕಲರ್ ಮಾಡುವುದು.ಅತಿಯಾದ ಶಾಖ ಬಳಸುವುದು.ಮತ್ತು ಕೂದಲನ್ನು ಬಿಗಿಯಾಗಿ ಕಟ್ಟುವುದರಿಂದ ಕೂದಲು ಹಾನಿಗೊಳಗಾಗಬಹುದು.
2.ಕೂದಲು ಉದುರುವುದನ್ನು ಕಡಿಮೆ ಮಾಡಲು ಸರಳ ಟಿಪ್ಸ್ ಗಳು
. ಪೌಷ್ಟಿಕ ಆಹಾರ ಸೇವನೆ
ಪ್ರತಿದಿನ ಆಹಾರದಲ್ಲಿ ಬೇಳೆಕಾಳು,ಹಾಲು, ಮೊಸರು, ಸೊಪ್ಪು, ತರಕಾರಿಗಳು, ಹಣ್ಣುಗಳು ಮತ್ತು ಬೀಜಗಳನ್ನು ಸೇರಿಸಿಕೊಳ್ಳಿ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಹಾಯ ಮಾಡುತ್ತವೆ.
.ಸಾಕಷ್ಟು ನೀರು ಕುಡಿಯಿರಿ
ಬಾಯಾರಿಕೆಗೆ ಅನುಗುಣವಾಗಿ ನೀರು ಕುಡಿಯಿರಿ. ಬಿಸಿಲಿನಲ್ಲಿ ಕೆಲಸ ಮಾಡುವವರು ಮತ್ತು ಹೆಚ್ಚು ಬೆವರು ಬರುವವರು ನೀರಿನ ಕೊರತೆಯಾಗದಂತೆ ಗಮನ ಹರಿಸಬೇಕು.
.ಮೃದುವಾಗಿ ತಲೆ ಸ್ನಾನ ಮಾಡಿ
ನಿಮ್ಮ ಕೂದಲಿನ ಸ್ವಭಾವಕ್ಕೆ ಒಂದು ಸೌಮ್ಯ ಶಾಂಪು ಬಳಸಿ ತುಂಬಾ ಬಿಸಿ ನೀರಿನಿಂದ ತಲೆ ಸ್ನಾನ ಮಾಡುವುದನ್ನು ತಪ್ಪಿಸಿ. ಒದ್ದೆಯಾದ ಕೂದಲನ್ನು ಬಲವಾಗಿ ಉಜ್ಜಬೇಡಿ.
.ಕೂದಲಿಗೆ ಅತಿಯಾದ ಶಾಖ ನೀಡಬೇಡಿ
ಏರ್ ಡ್ರೈಯರ್ಕ,ರ್ಲಿಂಗ್ ಯಂತ್ರಗಳನ್ನು ಪದೇ ಪದೇ ಬಳಸುವುದನ್ನು ಕಡಿಮೆ ಮಾಡಿ.ಅದನ್ನು ಬಿಗಿಯಾಗಿ ಕಟ್ಟುವುದನ್ನು ತಪ್ಪಿಸಿ.
. ಒತ್ತಡವನ್ನು ಕಡಿಮೆ ಮಾಡಿ
ಪ್ರತಿದಿನ ಸ್ವಲ್ಪ ಸಮಯ ನಡಿಗೆ ಯೋಗ ಅಥವಾ ಧ್ಯಾನಕ್ಕೆ ಮೀಸಲಿಡಿ. ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
.ಸಾಕಷ್ಟು ನಿದ್ರೆ ಮಾಡಿ
ಪ್ರತಿದಿನ ಒಂದು ಸಮಯಕ್ಕೆ ಮಲಗುವ ಮತ್ತು ಹೇಳುವ ಅಭ್ಯಾಸ ಬೆಳೆಸಿಕೊಳ್ಳಿ.ವಯಸ್ಕರು ಸಾಮಾನ್ಯವಾಗಿ 7-9 ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸಬೇಕು.
.ವೈದ್ಯರ ಸಲಹೆ ಪಡೆಯಿರಿ
ಕೂದಲು ಅತಿಯಾಗಿ ಉದುರುತ್ತಿದ್ದರೆ ತಲೆಯ ಮೇಲೆ ಅಲ್ಲಲ್ಲಿ ಬೋಳು.ತೇಪೆಗಳು ಕಾಣಿಸಿಕೊಂಡರೆ ಅಥವಾ ನೆತ್ತಿಯಲ್ಲಿ ತುರಿಕೆ ನೋವು ಮತ್ತು ಗಾಯಗಳಿದ್ದರೆ ಚರ್ಮ ರೋಗ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.
3.ತೆಂಗಿನ ಎಣ್ಣೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆಯೇ?
ತೆಂಗಿನ ಎಣ್ಣೆ ಕೂದಲಿನ ತೇವಾಂಶವನ್ನು ಕಾಪಾಡಲು. ಮತ್ತು ಕೂದಲು ಉದುರುವುದನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.ಆದರೆ ವಂಶಪಾರಂಪರ್ಯ ಥೈರಾಯ್ಡ್ ಸಮಸ್ಯೆ ಅಥವಾ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಕೂದಲು ಉದುರುವಿಕೆಯನ್ನು ಎಣ್ಣೆಯೊಂದರಿಂದಲೇ ನಿಲ್ಲಿಸಲು ಸಾಧ್ಯವಿಲ್ಲ.ಎಣ್ಣೆ ಹಚ್ಚುವುದರಿಂದ ತಲೆಹೊಟ್ಟು ಅಥವಾ ತುರಿಕೆ ಹೆಚ್ಚಾದರೆ ಅದರ ಬಳಕೆಯನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಿರಿ.
4.ಕೂದಲಿನ ಆರೋಗ್ಯಕ್ಕೆ ಯಾವ ಆಹಾರಗಳು ಒಳ್ಳೆಯದು.
ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಳಗಿನ ಆಹಾರಗಳನ್ನು ಸಮತೋಲಿಕ ಆಹಾರದ ಭಾಗವಾಗಿ ಸೇವಿಸಬಹುದು.
.ಬೇಳೆ ಮತ್ತು ಕಾಳುಗಳು: ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸುತ್ತವೆ.
.ಸೊಪ್ಪು ಮತ್ತು ತರಕಾರಿಗಳು:ವಿವಿಧ ವಿಟಮಿನ್ ಗಳು ಮತ್ತು ಖನಿಜಾಂಶಗಳನ್ನು ಒದಗಿಸುತ್ತವೆ.
.ನೆಲಗಡಲೆ ಮತ್ತು ಬೀಜಗಳು:ಪ್ರೋಟೀನ್ ಆರೋಗ್ಯಕರ ಕೊಬ್ಬು ಮತ್ತು ಕೆಲವು ಖನಿಜಾಂಶಗಳನ್ನುಹೊಂದಿರುತ್ತದೆ.
.ಮೊಟ್ಟೆ:ತಿನ್ನುವವರಿಗೆ ಪ್ರೋಟೀನ್ನಿನ ಉತ್ತಮ ಮೂಲವಾಗಿದೆ.
.ಹಣ್ಣುಗಳು:ದೇಹಕ್ಕೆ ಅಗತ್ಯವಾದ ವಿಟಮಿನ್ಗಳು ಮತ್ತು ಇತರ ಪೋಷಕಾಂಶಗಳನ್ನು ಒದಗಿಸುತ್ತವೆ.
ಯಾವುದೇ ವಿಟಮಿನ್ ಮಾತ್ರೆ ಅಥವಾ ಕಬ್ಬಿಣದ ಮಾತ್ರೆಗಳನ್ನು.ಪರೀಕ್ಷೆ ಮತ್ತು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬೇಡಿ. ಅಗತ್ಯವಿಲ್ಲದೆ ಹೆಚ್ಚಿನ ಪ್ರಮಾಣದ ಕೆಲವು ಪೋಷಕಾಂಶಗಳನ್ನು ಸೇವಿಸುವುದರಿಂದ ತೊಂದರೆ ಉಂಟಾಗಬಹುದು.
5.ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು
ದಿನಕ್ಕೆ ಕೆಲವು ಕೂದಲು ಉದುರುವುದು ಸಾಮಾನ್ಯ.ಆದರೆ ಇಂದಿಗಿಂತ ಹೆಚ್ಚು ಕೂದಲು ಉದುರುತ್ತಿದ್ದರೆ ಕೂದಲು ತೆಳುವಾಗಿದ್ದರೆ ಅಥವಾ ಹಠತ್ತನೆ ಬೋಳು ತೇಪೆಗಳು ಕಂಡುಕೊಂಡರೆ ನಿರ್ಲಕ್ಷಿಸಬೇಡಿ.
ಇದ್ದಿರುವ ಅಗತ್ಯವಿದ್ದರೆ ರಕ್ತಹೀನತೆ, ಕಬ್ಬಿಣಾಂಶದ ಕೊರತೆ ಮತ್ತು ಥೈರಾಯ್ಡ್ ಸಮಸ್ಯೆಗಳನ್ನು ಪರಿಶೀಲಿಸಬಹುದು.ಕಾರಣವನ್ನು ಸರಿಯಾಗಿ ಗುರುತಿಸಿದರೆ ಸೂಕ್ತ ಚಿಕಿತ್ಸೆಯಿಂದ ಅನೇಕ ಸಂದರ್ಭಗಳಲ್ಲಿ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. “ಹಾಗಾಗಿ ಹಿಂದಿನಿಂದಲೇ ನಿಮ್ಮ ದಿನಚರಿಯಲ್ಲಿ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ನಿಮ್ಮ ಕೂದಲಿನ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ “ಇದರಿಂದ ಖಂಡಿತ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.
6.ವ್ಯಾಯಾಮ ದೇಹಕ್ಕೆ ಎಷ್ಟು ಮುಖ್ಯವಾಗುತ್ತದೆ?
ನಮ್ಮ ದೇಹದ ಎಲ್ಲಾ ಭಾಗಗಳಿಗೂ ರಕ್ತ ಪರಿಚಲನೆ ಸರಿಯಾಗಿ ಆದರೆ ಎಲ್ಲಾ ಭಾಗದ ನರಗಳು ಆ್ಯಕ್ಟಿವೇಟ್ ಆಗಿರುತ್ತವೆ. ಮತ್ತೆ ಎಲ್ಲ ನರಗಳಿಗೂ ಸಮತೋಲನದ ಪ್ರೋಟೀನ್ ಹರಿದು ಹೋಗುತ್ತದೆ.
ತಲೆ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಂತ ಪ್ರಮುಖವಾಗಿದೆ.ಮೇಲೆ ತಿಳಿಸಲಾದ ನಿಯಮಗಳನ್ನು ಮತ್ತು ನೈಸರ್ಗಿಕ ಮನೆಮದ್ದುಗಳನ್ನು ಸರಿಯಾಗಿ ಪಾಲಿಸುವುದರಿಂದ ಕೂದಲು ಉದುರುವುದನ್ನು ಸುಲಭವಾಗಿ ತಡೆಯಬಹುದು. ಒಂದು ವೇಳೆ ಸಮಸ್ಯೆ ತೀವ್ರವಾಗಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಉತ್ತಮ.
ಕೊನೆಯ ಮಾತು
ಕೂದಲು ಉದುರುವುದಕ್ಕೆ ಒಂದೇ ಕಾರಣವಿರುವುದಿಲ್ಲ. ಆಹಾರ, ನಿದ್ರೆ, ಮಾನಸಿಕ ಒತ್ತಡ, ವಂಶಪಾರಂಪರ್ಯ ಮತ್ತು ಆರೋಗ್ಯ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ಆದ್ದರಿಂದ ಮನೆಯಲ್ಲೇ ಪರಿಹಾರ ಹುಡುಕುವುದರ ಜೊತೆಗೆ ಸಮಸ್ಯೆ ಮುಂದುವರೆದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಸೂಚನೆ:ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ.ಇದು ವೈದ್ಯರ ತಪಾಸಣೆ ಅಥವಾ ಚಿಕಿತ್ಸೆಗೆ ಪರಿಹಾರ ಅಲ್ಲ. ಧನ್ಯವಾದಗಳು.ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ.
ಇದನ್ನು ಓದಿ: [ “ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: 6ನೇ ತರಗತಿಯ AI ಶಿಕ್ಷಣ.” https://nammasuddivartha.com/wp-admin/post.php?post=188&action=edit] ಹೆಚ್ಚಿನ ಮಾಹಿತಿಗಾಗಿ ವಿಕಿಪೀಡಿಯ ಪುಟ ನೋಡಿ.

