ನಮಸ್ಕಾರ, ರೈತ ಬಾಂಧವರೇ,
ಇವತ್ತು ನಾವು ದಾಳಿಂಬೆ ತೋಟದಲ್ಲಿ ಬಹಳ ಮುಖ್ಯವಾದ ಒಂದು ವಿಷಯದ ಬಗ್ಗೆ ಮಾತಾಡೋಣ. ದಾಳಿಂಬೆ ಗಿಡಕ್ಕೆ ನಿರ್ವಹಣೆ ಮಾಡುವುದು ಹೇಗೆ?ಯಾವ ಕೊಂಬೆಗಳನ್ನು ತೆಗೆಯಬೇಕು, ಯಾವ ಕೊಂಬೆಗಳನ್ನು ಉಳಿಸಬೇಕು ಮತ್ತು ನಿರ್ವಹಣೆ ಮಾಡಿದ ನಂತರ ಗಿಡಗಳನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋದು.ದಾಳಿಂಬೆ ಗಿಡವನ್ನು ಹಾಗೆ ಬೆಳೆಯಲು ಬಿಟ್ಟರೆ ತುಂಬಾ ಚಿಗುರು ಮತ್ತು ಕೊಂಬೆಗಳು ಬರುತ್ತವೆ.ಕೆಲವು ಕೊಂಬೆಗಳು ಗಿಡದ ಒಳಭಾಗ ಬೆಳೆಯುತ್ತವೆ. ಇನ್ನು ಕೆಲವು ಕೊಂಬೆಗಳು ಒಂದಕ್ಕೊಂದು ತಾಗಿಕೊಂಡು ದಟ್ಟವಾಗುತ್ತವೆ.ಇದರಿಂದ ಗಿಡದ ಒಳಭಾಗಕ್ಕೆ ಗಾಳಿ ಮತ್ತು ಸೂರ್ಯನ ಬೆಳಕು ಸರಿಯಾಗಿ ಸಿಗದೆ ಇರಬಹುದು.
ಅದಕ್ಕಾಗಿ ದಾಳಿಂಬೆ ತೋಟದಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು.ಮುಖ್ಯವಾಗಿರುತ್ತದೆ.
ಯಾವ ಕೊಂಬೆಗಳನ್ನು ತೆಗೆಯಬೇಕು?
ಮೊದಲಿಗೆ ಗಿಡದಲ್ಲಿರುವ ಒಣಗಿದ ಕೊಂಬೆಯನ್ನು ಗಮನಿಸಬೇಕು. ಸಂಪೂರ್ಣ ಒಣಗಿದ ಕೊಂಬೆ ಇದ್ದರೆ ಅದನ್ನು ತೆಗೆದುಹಾಕಬೇಕು. ರೋಗದ ಲಕ್ಷಣ ಇರುವ ಕೊಂಬೆ ಕಂಡುಬಂದರೂ ಅದನ್ನು ನಿರ್ಲಕ್ಷಿಸಬಾರದು. ಸಮಸ್ಯೆ ಏನು ಎಂದು ಸರಿಯಾಗಿ ಗುರುತಿಸಿ ಅಗತ್ಯವಿದ್ದರೆ ಕೃಷಿ ಅಥವಾ ತೋಟಗಾರಿಕೆ ಅಧಿಕಾರಿಗಳ ಸಲಹೆ ಪಡೆಯಬೇಕು.
ಗಿಡದ ಬುಡದಿಂದ ಬರುತ್ತಿರುವ ಅನಗತ್ಯ ಚಿಗುರುಗಳನ್ನು ಕೂಡ ಗಮನಿಸಬೇಕು.ಗಿಡದ ಮುಖ್ಯ ಬೆಳವಣಿಗೆಗೆ ಉಪಯೋಗವವಾಗದ ಚಿಗುರುಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಹಾಕಬೇಕು.
ಎಲ್ಲಾ ಕೊಂಬೆಗಳನ್ನು ಹೊಂದಿಸಲು ಕತ್ತರಿಸಬೇಡಿ.
ಬಂದವರೆ ನಿರ್ವಹಣೆ ಮಾಡುವಾಗ ಒಂದು ವಿಷಯ ಮುಖ್ಯವಾಗಿ ನೆನಪಿಟ್ಟುಕೊಳ್ಳಬೇಕು.
ಕಂಡ ಕಂಡ ಕೊಂಬೆಗಳನ್ನು ಕತ್ತರಿಸಬಾರದು.
ಗಿಡ ದಟ್ಟವಾಗಿದೆ ಎಂದು ತುಂಬಾ ಕೊಂಬೆಗಳನ್ನು ಒಂದೇ ಸಲ ಕತ್ತರಿಸಿದರೆ.ಗಿಡಕ್ಕೆ ಒತ್ತಡ ಉಂಟಾಗಬಹುದು.ಯಾವ ಕೊಂಬೆ ಬೇಕು ಯಾವ ಕೊಂಬೆ ಬೇಡ ಎನ್ನುವುದನ್ನು ಗಿಡದ ವಯಸ್ಸು ಮತ್ತು ಬೆಳವಣಿಗೆಯನ್ನು ನೋಡಿ.ನಿರ್ಧಾರ ಮಾಡಿಕೊಳ್ಳಬೇಕು.ಇದರಿಂದ ಗಿಡದ ಒಳಭಾಗಕ್ಕೆ ಗಾಳಿ ಓಡಾಡಲು ಮತ್ತು ಸೂರ್ಯನ ಬೆಳಕು ಬೀಳಲು.ಸಹಾಯ ಮಾಡುತ್ತದೆ.
ನಿರ್ವಹಣೆ ಮಾಡುವ ಉಪಕರಣಗಳು ಸ್ವಚ್ಛವಾಗಿರಬೇಕು.
ನಿರ್ವಹಣೆ ಮಾಡುವಾಗ ಬಳಸುವ ಕತ್ತರಿ ಸ್ವಚ್ಛವಾಗಿರುವುದು ಬಹಳ ಮುಖ್ಯವಾಗಿರುತ್ತದೆ.ಒಂದು ಗಿಡದಲ್ಲಿ ರೋಗಪೀಡಿತ ಕೊಂಬೆಗಳನ್ನು ಕತ್ತರಿಸಿದ ನಂತರ ಅದೇ ಉಪಕರಣಗಳನ್ನು ಸ್ವಚ್ಛ ಮಾಡದೆ ಮತ್ತೊಂದು ಗಿಡಕ್ಕೆ ಒಳಸಬಾರದು.ಉಪಕರಣವನ್ನು ಸ್ವಚ್ಛವಾಗಿಟ್ಟುಕೊಂಡರೆ ತೋಟದಲ್ಲಿ ರೋಗ ಹರಡುವ.ಅವನು ಕಡಿಮೆ ಮಾಡಲು ಸಹಾಯವಾಗುತ್ತದೆ.ಕತ್ತರಿಸಿದ ರೋಗಪೀಡಿತ ಕೊಂಬೆಗಳನ್ನು ಗಿಡದ ಕೆಳಗೆ ಬಿಟ್ಟುಬಿಡದೆ ತೋಟದಿಂದ ತೆಗೆದು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಉತ್ತಮ.
ನೀರು ಬೇಕು. ಆದರೆ ಗಿಡದ ಬುಡದಲ್ಲಿ ಹೆಚ್ಚು ನೀರು ನಿಂತುಕೊಳ್ಳುವುದು ಒಳ್ಳೆಯದಲ್ಲ.ಮಳೆ ಹೆಚ್ಚಾದಾಗ ತೋಟದಲ್ಲಿ ನೀರು ನಿಂತರೆ ಬೇರುಗಳಿಗೆ ತೊಂದರೆ ಉಂಟಾಗಬಹುದು. ಆದ್ದರಿಂದ ಹೊಲದಲ್ಲಿ ಹೆಚ್ಚುವರಿ ನೀರು ಹೊರಗೆ ಹೋಗುವ ವ್ಯವಸ್ಥೆ ಮಾಡಿರಬೇಕು.ನೀರಾವರಿ ಇರುವ ರೈತರು ಮಣ್ಣಿನ ತೇವಾಂಶ ಮತ್ತು ಹವಾಮಾನವನ್ನು ಗಮನಿಸಿ ನೀರು ಕೊಡಬೇಕು.
ನೀರು ನಿಲ್ಲದಂತೆ ನೋಡಿಕೊಳ್ಳಿ.
ಗೊಬ್ಬರವನ್ನು ಸರಿಯಾದ ರೀತಿಯಲ್ಲಿ ನೀಡಿ.
ಗಿಡ ಚೆನ್ನಾಗಿ ಬೆಳೆಯಬೇಕು ಎಂದು ಬೇಗ ಬಿಟ್ಟಿಯಾಗಿ ಹೆಚ್ಚು ಗೊಬ್ಬರ ಹಾಕಬಾರದು.
ಗಿಡದ ವಯಸ್ಸು.ಸ್ಥಿತಿ ಮತ್ತು ಬೆಳೆಯುವ ಹಂತವನ್ನು ಗಮನಿಸಿ ಪೋಷಕಾಂಶಗಳನ್ನು ನೀಡುವುದು ಉತ್ತಮ.ಸಾಧ್ಯವಾದರೆ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ತೋಟಗಾರಿಕೆ, ಕೃಷಿ ಇಲಾಖೆಗಳ ಸಲಹೆಯದಂತೆ ಗೊಬ್ಬರ ನಿರ್ವಹಣೆ ಮಾಡಬಹುದು.
ರೋಗ ಮತ್ತು ಕೀಟಗಳನ್ನು ಗಮನಿಸಿ.
ದಾಳಿಂಬೆ ತೋಟದಲ್ಲಿ.ಹಾಗಾಗಿ ಗಿಡಗಳನ್ನು ಪರಿಶೀಲಿಸಬೇಕು.
ಎಲೆಗಳಲ್ಲಿ ಕಲೆ ಬರುತ್ತಿದೆಯಾ?
ಚಿಗುರು ಸರಿಯಾಗಿ ಬೆಳೆಯುತ್ತಿಲ್ಲವಾ?
ಕೊಂಬೆ ಒಣಗುತ್ತಿದೆಯಾ?
ಮಣ್ಣಿನಲ್ಲಿ ಕಲೆ ಅಥವಾ ಬಿರುಕು ಕಾಣಿಸುತ್ತಿದೆಯಾ?
ಇಂತಹ ಬದಲಾವಣೆಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬಾರದು.ರೋಗ ಅಥವಾ ಕೀಟ ಏನು ಎಂದು ತಿಳಿಯದೆ ಸ್ವತಂತ್ರವಾಗಿ ಔಷಧಿ ಸಿಂಪಡಿಸುವ ಬದಲು ಸಮಸ್ಯೆಯನ್ನು ಸರಿಯಾಗಿ ಗುರುತಿಸಿ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುವುದು ಉತ್ತಮ.
ಹೊಸ ತೋಟ ಮಾಡಿದವರು ಏನು ಮಾಡಬೇಕು?
ಹೊಸದಾಗಿ ದಾಳಿಂಬೆ ತೋಟ ಮಾಡಿರುವ ರೈತರು ಆರಂಭದಿಂದಲೇ ಗಿಡದ ಬೆಳವಣಿಗೆಯನ್ನು ಗಮನಿಸಬೇಕು.ಗಿಡ ತುಂಬಾ ದಟ್ಟವಾದ ನಂತರ ಸರಿಪಡಿಸುವುದಕ್ಕಿಂತ ಆರಂಭದಿಂದಲೇ ಅನಗತ್ಯ ಚಿಗುರು ಮತ್ತು ಕೊಂಬೆಗಳನ್ನು ನಿಯಂತ್ರಿಸುವುದು ಸುಲಭ. ಆದರೆ ಪ್ರತಿ ತೋಟಕ್ಕೂ ಒಂದೇ ರೀತಿಯ ನಿರ್ವಹಣಾ ವಿಧಾನ ನೋಯಿಸುವುದಿಲ್ಲ. ಗಿಡದ ವಯಸ್ಸು ತಳಿ ಬೆಳವಣಿಗೆ ಮತ್ತು ಸ್ಥಳೀಯ ಹವಾಮಾನವನ್ನು ಗಮನಿಸಿ ನಿರ್ವಹಣೆ ಮಾಡಬೇಕು.
ಉತ್ತಮ ಇಳುವರಿಗೆ ನಿರ್ವಹಣೆ ಮಾತ್ರ ಸಾಕಾಗುವುದಿಲ್ಲ.
ರೈತ ಬಾಂಧವರೇ.ದಾಳಿಂಬೆಯಲ್ಲಿ ಉತ್ತಮ ಇಳುವರಿ ಬರಲು ನಿರ್ವಹಣೆ ಒಂದೇ ಕಾರಣವಲ್ಲ.
ಉತ್ತಮ ಸಸಿ ಸರಿಯಾದ ನೀರಾವರಿ, ಪೋಷಕಾಂಶ ನಿರ್ವಹಣೆ ರೋಗ ಮತ್ತು ಕೀಟ ನಿಯಂತ್ರಣ, ಮಣ್ಣಿನ ಆರೋಗ್ಯ ಮತ್ತು ಸರಿಯಾದ ತೋಟ ನಿರ್ವಹಣೆ ಎಲ್ಲವೂ ಮುಖ್ಯ.ಗಿಡವನ್ನು ಪ್ರತಿದಿನ ಸ್ವಲ್ಪ ಸಮಯ ಗಮನಿಸುವ ಅಭ್ಯಾಸ ಮಾಡಿಕೊಂಡರೆ.ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಲು ಸಾಧ್ಯವಾಗುತ್ತದೆ.
ಕೊನೆಯ ಮಾತು.
ದಾಳಿಂಬೆ ತೋಟದಲ್ಲಿ ನಿರ್ವಹಣೆ ಅಂದರೆ ಸುಮ್ಮನೆ ಕೊಂಬೆ ಕತ್ತರಿಸುವ ಕೆಲಸವಲ್ಲ.
ಗಿಡಕ್ಕೆ ಸರಿಯಾದ ಬೆಳಕು ಮತ್ತು ಗಾಳಿ ಸಿಗುವಂತೆ ಮಾಡಿ ಅನಗತ್ಯ ಬೆಳವಣಿಗೆಯನ್ನು ನಿಯಂತ್ರಿಸಿ ಆರೋಗ್ಯಕರ ಗಿಡವನ್ನು ಬೆಳೆಸಲು ಮಾಡುವ ಪ್ರಮುಖ ನಿರ್ವಹಣಾ ಕ್ರಮವಾಗಿದೆ.ಆದರೆ ಅತಿಯಾಗಿ ಕೊಂಬೆಗಳನ್ನು ಕತ್ತರಿಸಬಾರದು. ಏನು ಕತ್ತರಿಸದೆ ಗಿಡವನ್ನು ತುಂಬಾ ದಟ್ಟವಾಗಿಯೂ ಬಿಡಬಾರದು.
ಗಿಡದ ಸ್ಥಿತಿಯನ್ನು ನೋಡಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ನೀರು ಮತ್ತು ಪೋಷಕಾಂಶಗಳನ್ನು ಸರಿಯಾಗಿ ನೀಡಿ ರೋಗ ಕೀಟಗಳ ಬಗ್ಗೆ ಗಮನವಿಟ್ಟು ತೋಟವನ್ನು ನಿರ್ವಹಿಸಿದರೆ ಉತ್ತಮ ಬೆಳವಣಿಗೆ ಪಡೆಯಲು ಸಹಾಯವಾಗುತ್ತದೆ.
ನಿಮ್ಮ ದಾಳಿಂಬೆ ತೋಟ ಚೆನ್ನಾಗಿ ಬೆಳೆದು.ಉತ್ತಮ ಗುಣಮಟ್ಟದ ಹಣ್ಣು ಬಂದು ರೈತರಿಗೆ ಒಳ್ಳೆಯ ಆದಾಯ ಸಿಗಲಿ ಎಂಬುದು ನಮ್ಮ ಆಶಯ.ಧನ್ಯವಾದಗಳು. ರೈತ ಬಾಂಧವರೇ.

