ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ಸೇವೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಸಣ್ಣ ಹಣ ವರ್ಗಾವಣೆಯಿಂದ ಹಿಡಿದು ದೊಡ್ಡ ಬಿಸಿನೆಸ್ ವಹಿವಾಟುಗಳವರೆಗೆ ನಾವು ಬ್ಯಾಂಕ್ಗಳನ್ನೇ ಅವಲಂಬಿಸಿದ್ದೇವೆ.ಆದರೆ ನೀವೇನಾದರೂ ಮುಂದಿನ ವಾರದಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಇಟ್ಟುಕೊಂಡಿದ್ದರೆ ಈ ಸುದ್ದಿ ನಿಮಗಾಗಿ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(UFBU) ಸೆಪ್ಟೆಂಬರ್ ಕೊನೆಯ ವಾರದಲ್ಲಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.ಸೆಪ್ಟೆಂಬರ್ ಇಪ್ಪತ್ತೆಂಟರಿಂದ ಸೆಪ್ಟೆಂಬರ್ ಮೂವತ್ತರವರೆಗೆ ಸತತ ಮೂರು ದಿನಗಳ ಕಾಲ ದೇಶದ ಬಹುತೇಕ ಸರ್ಕಾರಿ ಮತ್ತು ಕೆಲವು ಖಾಸಗಿ ಬ್ಯಾಂಕ್ಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಮತ್ತು ನೀವು ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕ್ ಮುಷ್ಕರದ ದಿನಾಂಕಗಳು ಮತ್ತು ರಜೆಗಳ ಪಟ್ಟಿ.
ಮುಂದಿನ ವಾರದ ಬ್ಯಾಂಕ್ ವೇಳಾಪಟ್ಟಿಯನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು.ಏಕೆಂದರೆ ಮುಷ್ಕರ ದಿನಗಳ ಜೊತೆಗೆ ವಾರಾಂತ್ಯದ ರಜೆಗೂ ಸೇರಿಕೊಳ್ಳುವುದರಿಂದ ಸತತವಾಗಿ ಬ್ಯಾಂಕ್ಗಳು ಮುಚ್ಚಿರುತ್ತವೆ.
.ಸೆಪ್ಟೆಂಬರ್ 26(ಶನಿವಾರ): ನಾಲ್ಕನೇ ಶನಿವಾರ(ಬ್ಯಾಂಕ್ ರಜೆ )
.ಸೆಪ್ಟೆಂಬರ್ 27(ಭಾನುವಾರ):ವಾರಾಂತ್ಯದ ರಜೆ(ಬ್ಯಾಂಕ್ ರಜೆ)
.ಸೆಪ್ಟೆಂಬರ್ 28(ಸೋಮವಾರ):ದೇಶವ್ಯಾಪಿ ಬ್ಯಾಂಕ್ ಮುಷ್ಕರ- ದಿನ 1
.ಸೆಪ್ಟೆಂಬರ್ 29(ಮಂಗಳವಾರ):ದೇಶವ್ಯಾಪಿ ಮುಷ್ಕರ-ದಿನ 2
.ಸೆಪ್ಟೆಂಬರ್ 30(ಬುಧವಾರ): ದೇಶವ್ಯಾಪಿ ಬ್ಯಾಂಕ್ ಮುಷ್ಕರ.-ದಿನ 3
ಅಂದರೆ.ಸೆಪ್ಟೆಂಬರ್ ಇಪ್ಪತ್ತಾರರಿಂದ ಸೆಪ್ಟೆಂಬರ್ ಮೂವತ್ತರವರೆಗೆ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗಲಿದೆ.ಒಂದರಂದು ಮಾತ್ರ ಬ್ಯಾಂಕುಗಳು ಯಥಾಸ್ಥಿತಿಗೆ ಮರಳಿವೆ.
ಬ್ಯಾಂಕ್ ನೌಕರರು ಮುಷ್ಕರ ಮಾಡುತ್ತಿರುವುದು ಏಕೆ?
ಬ್ಯಾಂಕ್ ಯೂನಿಯನ್ ಗಳ ಒಕ್ಕೂಟವಾದ UFBUಹಲವು ವರ್ಷಗಳಿಂದ.ಸರ್ಕಾರದ ಮುಂದೆ ಕೆಲವು ಪ್ರಮುಖ ಬೇಡಿಕೆಗಳನ್ನು ಇಡುತ್ತಾ ಬಂದಿದೆ. ಈ ಬಾರಿ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳ ಗಮನ ಸೆಳೆಯಲು ಈ ಮೂರು ದಿನಗಳ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಅವರ ಪ್ರಮುಖ ಬೇಡಿಕೆಗಳು ಇಲ್ಲಿವೆ.
1.ವಾರಕ್ಕೆ ಐದನೇ ದಿನಗಳ ಕೆಲಸದ ದಿನ.(5 daysbanking)
ಪ್ರಸ್ತುತ ಬ್ಯಾಂಕ್ ನೌಕರರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ಇರುತ್ತದೆ.ಐ ಟಿ ಮತ್ತು ಇತರರ ವಲಯಗಳಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ನೀತಿಯನ್ನು ಜಾರಿಗೆ ತರಬೇಕು ಎಂಬುದು ಅವರ ದೀರ್ಘಕಾಲದ ಬೇಡಿಕೆಯಾಗಿದೆ.
2.ಪರಿಷ್ಕರಣೆ(Wage Revision): ಹೆಚ್ಚುತ್ತಿರುವ ಹಣದುಬ್ಬರಕ್ಕೆ.ಅನುಗುಣವಾಗಿ ಬ್ಯಾಂಕ್ ನೌಕರರ ವೇತನ ಮತ್ತು ಭತ್ತೆಯನ್ನು ಶೀಘ್ರವಾಗಿ ಪರಿಷ್ಕರಿಸಬೇಕು.
3.ಹೊಸ ಪೆನ್ಷನ್ ಯೋಜನೆ ರದ್ದು.(OPS vsNPS):ರಾಷ್ಟ್ರೀಯ ಪೆನ್ಷನ್ ಯೋಜನೆ(NPS) ಬದಲಿಗೆ ಹಳೆಯ ಪೆನ್ಷನ್ ಯೋಜನೆ ಅನ್ನು ಮರು ಜಾರಿಗೊಳಿಸಬೇಕು.
4.ಖಾಲಿ ಹುದ್ದೆಗಳ ಭರ್ತಿ:ಬ್ಯಾಂಕ್ ಗಳಲ್ಲಿ.ಸಿಬ್ಬಂದಿ ಕೊರತೆಯಿಂದಾಗಿ ಹಾಲಿ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಆದ್ದರಿಂದ ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
ಸಾರ್ವಜನಿಕರ ಮೇಲೆ ಬೀರುವ ಪರಿಣಾಮಗಳೇನು?
ಐದು ದಿನಗಳ ಸುದೀರ್ಘ ರಜೆ ಮತ್ತು ಮುಷ್ಕರದಿಂದಾಗಿ ಸಾಮಾನ್ಯ ಜನರಿಗೆ ಮತ್ತು ವ್ಯಾಪಾರಿಗಳಿಗೆ ಹಲವು ರೀತಿಯ ತೊಂದರೆಗಳು ಎದುರಾಗಬಹುದು.
.ಚೆಕ್ ಕ್ಲಿಯರೆನ್ಸ್ ವಿಳಂಬ:ನೀವೇನಾದರೂ ಯಾರಿಗಾದರೂ ದೊಡ್ಡ ಮೊತ್ತದ ಚೆಕ್ ನೀಡಿದ್ದರೆ ಅಥವಾ ನಿಮಗೆ ಯಾರಾದರೂ ಚೆಕ್ ನೀಡಿದ್ದರೆ ಅದು ಕ್ಲಿಯರ್ ಆಗಲು ಅಕ್ಟೋಬರ್ ಮೊದಲ ವಾರದವರೆಗೆ ಬೇಕಾಯಬೇಕಾಗುತ್ತದೆ. ಚೆಕ್ ಕ್ಲಿಯರಿಂಗ್ ಹೌಸ್ ಗಳು ಮುಷ್ಕರದ ಅವಧಿಯಲ್ಲಿ ಸ್ಥಗಿತಗೊಳ್ಳಲಿವೆ.
.ಎಟಿಎಂಗಳಲ್ಲಿ ಹಣದ ಕೊರತೆ:ಸತತ ಐದು ದಿನಗಳ ಕಾಲ ಬ್ಯಾಂಕುಗಳು ಮುಚ್ಚಿರುವುದರಿಂದ ನಗರ ಮತ್ತು ಗ್ರಾಮೀಣ ಭಾಗದ ಎಟಿಎಂಗಳಲ್ಲಿ ನಗದು ಖಾಲಿಯಾಗುವ ಸಾಧ್ಯತೆ ದಟ್ಟವಾಗಿದೆ.ಬ್ಯಾಂಕ್ ಸಿಬ್ಬಂದಿ ಇಲ್ಲದ ಕಾರಣ ಎಟಿಎಂಗಳಿಗೆ ಹಣ ಮರು ತುಂಬಿಸುವ ಪ್ರಕ್ರಿಯೆ ನಿಲ್ಲಬಹುದು.
.ಲೋನ್ ಮತ್ತು ಸಾಲದ ಪ್ರಕ್ರಿಯೆಗಳು ಸ್ಥಗಿತ: ಹೊಸದಾಗಿ ಹೋಮ್ ಲೋನ್ ಕಾರ್ ಲೋನ್ ಅಥವಾ ಬಿಸಿನೆಸ್ ಲೋನ್ ಪಡೆಯಲು ಅರ್ಜಿ ಸಲ್ಲಿಸಿದವರ ಪ್ರಕ್ರಿಯೆಗಳು ಈ ಮೂರು ದಿನಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ.ಕರೆದ ಮುಗಿದ ನಂತರವೇ ಫೈಲುಗಳ ಪರಿಶೀಲನೆ ಆರಂಭವಾಗುತ್ತವೆ.
.ಸರ್ಕಾರಿ ಸಬ್ಸಿಡಿ ಮತ್ತು ಪೆನ್ಷನ್ ವಿಳಂಬ:ತಿಂಗಳ ಕೊನೆಯಲ್ಲಿ ಬರುವ ಸರ್ಕಾರಿ ಸಬ್ಸಿಡಿಗಳು, ವೃದ್ಧಾಪ್ಯ ವೇತನ ಅಥವಾ ಇತರ ಸೌಲಭ್ಯಗಳ ಹಣ, ಗ್ರಾಹಕರ ಖಾತೆಗೆ ಜಮೆಯಾಗುವುದು 2 3 ದಿನ ತಡವಾಗಬಹುದು.
ಗ್ರಾಹಕರು ಮಾಡಬೇಕಾದ ಮುನ್ನೆಚ್ಚರಿಕೆಗಳೇನು?
1.ಅಗತ್ಯವಿರುವಷ್ಟು ನಗದು ಇಟ್ಟುಕೊಳ್ಳಿ.
2.ಬಿಲ್ ಪೇಮೆಂಟ್ ಗಳನ್ನು ಮುಂಚಿತವಾಗಿ ಮಾಡಿ.
3.ಬಿಸಿನೆಸ್ ವಹಿವಾಟುಗಳನ್ನು ಆನ್ ಲೈನ್ ಮಾಡಿ.
4.ತುರ್ತು ಕೆಲಸಗಳನ್ನು ಹಿಂದೆ ಮುಗಿಸಿ.
ಉಪಸಂಹಾರ:ಬ್ಯಾಂಕ್ ನೌಕರರ ಬೇಡಿಕೆಗಳು ಸತತ ಮೂರು ದಿನಗಳ ಮುಷ್ಕರ ಮತ್ತು ವಾರಾಂತ್ಯದ ರಜೆಗಳು ಸೇರಿ ಸಾರ್ವಜನಿಕರಿಗೆ ದೊಡ್ಡ ಮಟ್ಟದ ತಲೆನೋವು ತರುವುದಂತೂ ಗ್ಯಾರಂಟಿ.ಸರ್ಕಾರ ಮತ್ತು ಬ್ಯಾಂಕ್ ಒಕ್ಕೂಟಗಳ ನಡುವೆ ಮಾತುಕತೆ ನಡೆದು ಮುಷ್ಕರ ಹಿಂಪಡೆಯುವ ಸಾಧ್ಯತೆಗಳು ಇವೆ.ಆದರೆ ಮುನ್ನೆಚ್ಚರಿಕೆಯಾಗಿ ನಾವು ಸಿದ್ಧರಾಗಿರುವುದು ಜಾಣತನ.ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.ಹಣಕಾಸಿನ ಕೆಲಸಗಳು ಸುಗಮವಾಗಿ ನಡೆಯಲುಸಹಾಯ ಮಾಡಿ ಧನ್ಯವಾದಗಳು. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿhttps://nammasuddivartha.com/wp-admin/post.php?post=188&action=edit

